ಬಹಿಷ್ಕಾರಕ್ಕೆ ಗುರಿಯಾದವರು ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೆ ನೇರವಾಗಿ ದೂರು ಸಲ್ಲಿಸಬಹುದು.
ಬೆಂಗಳೂರು: ವ್ಯಕ್ತಿ ಅಥವಾ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ಅಪರಾಧವೆಂದು ಪರಿಗಣಿಸಿಲಾಗಿದ್ದು, ಇಂಥಹ ಅಪರಾಧ ಎಸಗುವವರಿಗೆ ₹1 ಲಕ್ಷ ರು. ದಂಡ ಹಾಗೂ 3 ವರ್ಷಗಳವರೆಗೆ ಜೈಲು ಶಿಕ್ಷೆಗೆ ಒಳಪಡಿಸುವ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಕಾಯ್ದೆ 2025’ರ ರಾಜ್ಯ ಪತ್ರವನ್ನು ಹೊರಡಿಸಲಾಗಿದೆ.
ಈ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಕಾಯ್ದೆ ಅನ್ವಯ ಸಭೆ, ಪಂಚಾಯಿತಿ, ಜಮಾವಣೆ, ಮತ, ಅಭಿಪ್ರಾಯ ಸಂಗ್ರಹ ನಡೆಸುವ ಮೂಲಕ ಬಹಿಷ್ಕಾರಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷ ಸಹಾಯ, ಒತ್ತಡ, ಪ್ರಚೋದನೆ ನೀಡುವವರನ್ನೂ ಅಪರಾಧಿಗಳೆಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗುವುದು.
ಬಹಿಷ್ಕಾರಕ್ಕೆ ಒಳಗಾಗುವವರು ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೆ ನೇರವಾಗಿ ದೂರು ಸಲ್ಲಿಸಬಹುದು. ಇಂತಹ ಪ್ರಕರಣವನ್ನು ಪ್ರಥಮ ದರ್ಜೆ ನ್ಯಾಯಾಧೀಶರು ವಿಚಾರಣೆ ಮಾಡಲು ಅಧಿಕಾರ ವಿರುತ್ತದೆ.