ಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ಮನಕಲಕುವ ಭೀಕರ ಘಟನೆಯೊಂದು ನಡೆದಿದ್ದು ಈ ಕೃತ್ಯ ಧಾರವಾಡದ ಜನರನ್ನು ಬೆಚ್ಚಿ ಬೀಳಿಸಿದೆ. ಮನೆಯಲ್ಲಿದ್ದ ವೈದ್ಯನನ್ನು ಭೀಕರವಾಗಿ ಕೊಲೆ ಮಾಡಲಾಗಿದ್ದು,ಮನೆಯಲ್ಲಿದ್ದ 10 ವರ್ಷದ ಮಗುವಿನ ಮೇಲೂ ಗಂಭೀರ ಹಲ್ಲೆ ಮಾಡಲಾಗಿದೆ. ಹಲ್ಲೆಯೊಳಗಾಗಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿರಾಯು ಆಸ್ಪತ್ರೆಯ ವೈದ್ಯರಾದ ಡಾ. ಕಿರಣ್ ಹೊನ್ನಣ್ಣನವರ್ ಬರ್ಬರವಾಗಿ ಹತ್ಯೆಯಾಗಿದ್ದಾರೆ.ಈ ಘಟನೆಯು ಧಾರವಾಡದ ಕವಿವಿ ರಸ್ತೆಯ ಬಾರಾಕೊಟ್ರಿ ಬಡಾವಣೆಯಲ್ಲಿರುವ ರನ್ಮಾಸ್ಟೆಲ್ಲೋ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಚಾಕುವಿನಿಂದ ಇರಿದು ಹತ್ಯೆ ಮಾಡಿರೋ ಶಂಕೆ ವ್ಯಕ್ತವಾಗಿದೆ.
ಸಂಶಯ ಮೂಡಿಸಿದ ಪತ್ನಿಯ ನಡವಳಿಕೆ ;
ಈ ಇಡೀ ಘಟನೆ ನಡೆಯುವಾಗ ಡಾ. ಕಿರಣ್ ಅವರ ಪತ್ನಿ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಆದರೆ ಸದ್ಯ ಕೇಳಿ ಬರುತ್ತಿರುವ ಮಾಹಿತಿ ತೀವ್ರ ಆಘಾತಕಾರಿಯಾಗಿದೆ: “ಮಗ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರೂ, ಪಕ್ಕದ ಬೆಡ್ ಮೇಲೆ ಕುಳಿತು ಪತ್ನಿ ಮೊಬೈಲ್ ನೋಡುತ್ತಿದ್ದರು!” ಎನ್ನಲಾದ ಸಾಕ್ಷ್ಯವು ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.
ಈ ನಿಗೂಢ ಹಾಗೂ ಸಂಶಯಾಸ್ಪದ ನಡವಳಿಕೆಯ ಹಿನ್ನೆಲೆಯಲ್ಲಿ ಪೊಲೀಸರು ಸದ್ಯ ವೈದ್ಯರ ಪತ್ನಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ನಿಖರವಾದ ಕಾರಣವೇನು ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ.