ಮೂಡಬಿದಿರೆ: ಪ್ರೀತಿಗೆ ಬಿದ್ದು ವಿಚಲಿತನಾದ ಯುವಕನೊಬ್ಬ ವಿದ್ಯಾರ್ಥಿನಿಗೆ ಕ್ಲಾಸ್ ರೂಮಿಗೆ ನುಗ್ಗಿ ಚಾಕು ಇರಿದಿರುವ ಘಟನೆ ಮೂಡಬಿದಿರೆಯ ಖಾಸಗಿ ಕಾಲೇಜಿನಲ್ಲಿ ಸೋಮವಾರ ನಡೆದಿದೆ.
ಮಂಜುನಾಥ ಎಂಬಾತ ಚಾಕು ಇರಿದ ಆರೋಪಿಯಾಗಿದ್ದು, ಇರಿತಕ್ಕೊಳಗಾದ ವಿದ್ಯಾರ್ಥಿನಿ ಹಾಗೂ ಆರೋಪಿ ಇಬ್ಬರು ತುಮಕೂರಿನವರಾಗಿದ್ದು ಪಿಯುಸಿವರೆಗೆ ಇಬ್ಬರು ಒಟ್ಟಿಗೆ ವ್ಯಾಸಂಗ ಮಾಡಿದ್ದು ಇಬ್ಬರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ನಂತರ ಆರೋಪಿ ಮಂಜುನಾಥ್ ವ್ಯಾಸಂಗ ನಿಲ್ಲಿಸಿದ್ದು ವಿದ್ಯಾಎ ಕಾಲೇಜು ಮುಂದುವರಿಸಿದ್ದಳು. ಇವರಿಬ್ಬರ ನಡುವಿನ ಪ್ರೇಮ ಕುಟುಂಬದವರಿಗೆ ತಿಳಿದು ಪೋಷಕರು ಹುಡುಗಿಗೆ ಬುದ್ದಿವಾದ ಹೇಳಿದ್ದಾರೆ.
ಇದರಿಂದ ಕುಪಿತನಾದ ಆರೋಪಿ ಮಂಜುನಾಥ ಮೂಡುಬಿದಿರೆ ಬಂದು ತಂಗಿದ್ದು, ಸೋಮವಾರ ಕಾಲೇಜಿನ ಕೊಠಡಿಗೆ ನುಗ್ಗಿ ವಿದ್ಯಾರ್ಥಿನಿಗೆ ಚಾಕು ಇರಿದಿದ್ದಾನೆ. ತಕ್ಷಣ ಎಚ್ಚೆತ್ತ ವಿದ್ಯಾರ್ಥಿಗಳು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಇರಿತಕ್ಕೊಳಗಾದ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಆರೋಪಿ ಮಂಜುನಾಥ್ ವಿರುದ್ಧ ಕೊಲೆಯತ್ನ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.