ಸುದ್ದಿ

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) 25 ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್‌ಶಿಪ್- 2024 ಗೆ ಅಂತಿಮ ತೆರೆ

Share It

ವಿಜೇತ ತಂಡಗಳಿಗೆ ವಿನ್ನರ್ ಮತ್ತು ರನ್ನರ್ ಟ್ರೋಪಿ; ಚಿನ್ನ,ಬೆಳ್ಖಿ,ಸಿಲ್ವರ್ ಪದಕಗಳನ್ನು ನೀಡಿ ಗೌರವ

ಬೆಂಗಳೂರು: 25ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನ್ನಿಸ್ ಚಾಂಪಿಯನ್‌ಶಿಪ್ ಅನ್ನು ಅಖಿಲ ಭಾರತ ಪೊಲೀಸ್ ಕ್ರೀಡಾ ನಿಯಂತ್ರಣ ಮಂಡಳಿಯ ಆಶ್ರಯದಲ್ಲಿ  26-11-2024 ರಿಂದ 30-11-2024 ರ ವರೆಗೆ   “ಕರ್ನಾಟಕ ಸ್ಟೇಟ್ ಲಾನ್ ಟೆನ್ನಿಸ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ 5 ದಿನಗಳ ವರೆಗೆ ನಡೆದೆ ” ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋಸ್೯(CISF) 25ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್ ಶಿಪ್ ಗೆ ಅಂತಿಮ ತೆರೆ ಬಿದ್ದಿದೆ.

ಈ 25ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನ್ನಿಸ್ ಚಾಂಪಿಯನ್‌ಶಿಪ್ ನಲ್ಲಿ  ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಆಟಗಾರರನ್ನೊಳಗೊಂಡ 119 ತಂಡಗಳು ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸಿದ್ದವು. ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್,ಐಪಿಎಸ್ ಇವರು ಭಾಗವಹಿಸಿ ವಿಜೇತ ತಂಡಗಳಿಗೆ ಟ್ರೋಪಿ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ರಾಜು ಭಾರ್ಗವ, ಐಪಿಎಸ್, ಎಡಿಜಿ, ಗುಜರಾತ್ ಪೊಲೀಸ್, ಶ್ರೀ ಜಸ್ಪಾಲ್ ಸಿಂಗ್ ಎಡಿಜಿ, ಐಟಿಬಿಪಿ, ಶ್ರೀ ಜೋಸ್ ಮೋಹನ್, ಐಪಿಎಸ್. , IG/APS-II (ಸಂಘಟನಾ ಕಾರ್ಯದರ್ಶಿ), ಶ್ರೀ ಮಂಜುನಾಥ್ ಹೆಚ್., IPS, DIG/CASO ASG ಬೆಂಗಳೂರು (ಜಂಟಿ ಸಂಘಟನಾ ಕಾರ್ಯದರ್ಶಿ), ಶ್ರೀ ಸಂತೋಷ್ ಬಾಬು, IPS, FRRO ಬೆಂಗಳೂರು ವಿಮಾನ ನಿಲ್ದಾಣ, ಮತ್ತು ಶ್ರೀ ಮುಖೇಶ್ ತ್ಯಾಗಿ, IG/BSF ಇವರುಗಳು ಉಪಸ್ಥಿತರಿದ್ದರು.


Share It

You cannot copy content of this page