ಚಂಡೀಗಢ: ಹರ್ಯಾಣದಲ್ಲಿ ಕಸ ಗುಡಿಸುವ ಸರ್ಕಾರಿ
ಹುದ್ದೆಗೆ ಬರೋಬ್ಬರಿ 40,000 ಪದವೀಧರರು, 6,000 ಸ್ನಾತಕೋತ್ತರ ಪದವೀಧರರು ಮತ್ತು 1.12 ಲಕ್ಷ 12ನೇ ತರಗತಿ ಮುಗಿಸಿದವರು ಅರ್ಜಿ ಹಾಕಿದ್ದಾರೆ.
ಈ ಹುದ್ದೆಗೆ ಬಂದ ಅರ್ಜಿಗಳ ಪೈಕಿ ಪದವೀಧರರೇ ಅತಿ ಹೆಚ್ಚು ಪ್ರಮಾಣದಲ್ಲಿದ್ದಾರೆ. ಈ ಬಗ್ಗೆ ಉದ್ಯೋಗ ಆಕಾಂಕ್ಷಿ ಮನೀಶ್ ಕುಮಾರ್ ಮಾತನಾಡಿದ್ದು, ‘ನಾನು ಬಿಸಿನೆಸ್ ಸ್ಟಡೀಸ್‌ನಲ್ಲಿ ಸ್ನಾತಕೋತ್ತರ ಪದವೀಧರ, ನನ್ನ ಮಡದಿ ಶಾಲಾ ಶಿಕ್ಷಕಿ, ಇಬ್ಬರೂ ಅರ್ಜಿ ಹಾಕಿದ್ದೇವೆ. ನನ್ನ ಮಡದಿ ತಿಂಗಳೂ ಪೂರ್ತಿ ದಿನಕ್ಕೆ 9 ತಾಸು ದುಡಿದರೂ ಕೇವಲ 10000 ರು. ಸಂಬಳ, ಅದೇ ಇಲ್ಲಿ 15000 ರು. ಕೊಡುತ್ತಾರೆ. ಜೊತೆಗೆ ಇಲ್ಲಿ ಇಡೀ ದಿನ ದುಡಿವ ಅಗತ್ಯ ಇಲ್ಲ. ಮಿಕ್ಕ ಸಮಯದಲ್ಲಿ ಬೇರೆ ಉದ್ಯೋಗ ಮಾಡಬಹುದಾಗಿದೆ’ ಎಂದು ಹೇಳಿದ್ದಾರೆ.