ಹಾಸನ: ತರಬೇತಿ ಮುಗಿಸಿ ಇಲಾಖಾ ತರಬೇತಿಗೆ ವರದಿ ಮಾಡಿಕೊಳ್ಳಲು ಬರುತ್ತಿದ್ದ ಯುವ ಐಪಿಎಸ್ ಅಧಿಕಾರಿ ವಾಹನ ಅಪಘಾತಕ್ಕಿಡಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಾಸನ ತಾಲ್ಲೂಕಿನ, ಕಿತ್ತಾನೆ ಗಡಿ ಬಳಿ ಈ ದುರ್ಘಟನೆ ನಡೆದಿದೆ. ಜೀಪ್ ಪಲ್ಟಿಯಾದ ಪರಿಣಾಮ ಗಂಭೀರಗಾಯಗೊಂಡ ಹರ್ಷವರ್ಧನ್ ಎಂಬುವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಮೃತ ಹರ್ಷವರ್ಧನ್ ಅವರು 2022 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 153 ನೇ ಬ್ಯಾಂಕ್ ಪಡೆದಿದ್ದರು. ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು.