ಸುದ್ದಿ

ಪೋಕ್ಸೋ ಪ್ರಕರಣ; ದೈಹಿಕ ಶಿಕ್ಷಕನ ಬಂಧನ

Share It

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಲಕ್ಕೂರು ಗ್ರಾಮದಲ್ಲಿರುವ ದಾಬಸ್‌ಪೇಟೆ ಪಬ್ಲಿಕ್ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದ ದಾದಾಪೀ‌ರ್ ಎಂಬಾತ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದ ಮೇಲೆ ಬಂಧನವಾಗಿದ್ದಾನೆ.
ಶಾಲೆಯಲ್ಲಿ ವಿದ್ಯಾರ್ಥಿನಿ ಆಗಿದ್ದಾಗಿನ ಪರಿಚಯ ಬಳಸಿಕೊಂಡು ಹಲವು ಬಾರಿ ಲೈಂಗಿಕ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.

ಬಾಲಕಿಯನ್ನು ಹೆದರಿಸಿ ದೇವರಾಯನದುರ್ಗಕ್ಕೆ ಕರೆದೊಯ್ದು ನಂತರ ತುಮಕೂರಿನ ಲಾಡ್ಜ್ ಒಂದರಲ್ಲಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ. ಕೆಲ ದಿನಗಳ ನಂತರ ಲಕ್ಕೂರಿನ ತನ್ನ ಮನೆಗೂ ಕರೆ ತಂದು ಮತ್ತೊಮ್ಮೆ ದೈಹಿಕ ಸಂಪರ್ಕ ಮಾಡಿ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ತುಮಕೂರಿನ ಮಹಿಳಾ ಠಾಣೆಯಲ್ಲಿ ಪೋಕೋ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.


Share It

You cannot copy content of this page