ಜೈಪುರ: ಬಲವಂತ ಮತ್ತು ಮೋಸದಿಂದ ಆಗುವ ಮತಾಂತರ ತಡೆಯಲು ಮುಂದಾಗಿರುವ ರಾಜಸ್ಥಾನ ಸರ್ಕಾರ ಮತಾಂತರಗೊಳಿಸುವ ಉದ್ದೇಶದಿಂದ ಮದುವೆಯಾಗುವುದನ್ನು ತಡೆಯಲು ಮಸೂದೆಯೊಂದನ್ನು ಮಂಡಿಸಲು ರಾಜಸ್ಥಾನದ ಸರ್ಕಾರ ನಿರ್ಧರಿಸಿದೆ.
ಬಲವಂತ ಮತ್ತು ಮೋಸದಿಂದ ಮತಾಂತರ ಗೊಳಿಸುವುದನ್ನು ನಿಲ್ಲಿಸುವುದು ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ಮಂಡಿಸುವ ಮಸೂದೆಯ ಗುರಿಯಾಗಿದೆ. ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆ ಈ ನಿರ್ಧಾರ ಕೈಗೊಂಡಿದೆ.
ಅರುಣಾಚಲ ಪ್ರದೇಶ, ಒಡಿಶಾ, ಮಧ್ಯ ಪ್ರದೇಶ, ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಆಗಲೇ ಈ ರೀತಿಯ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಅಕ್ರಮ ಮತಾಂತರ ತಡೆಯಲು ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ನಿರ್ದಿಷ್ಟ ಕಾನೂನಿಲ್ಲ