ಸುದ್ದಿ

ತೆಲುಗಿನ ಪುಷ್ಪ-2 ಪ್ರೀಮಿಯರ್ ಶೋ ವೇಳೆ ನೂಕು ನುಗ್ಗಲು; ಮಹಿಳೆ ಸಾವು

Share It

ಹೈದರಾಬಾದ್: ತೆಲುಗು ನಟ ಅಲ್ಲು ಅರ್ಜುನ್ ಅವರ
ಪುಷ್ಪ 2: ದಿ ರೂಲ್‌ನ ಪ್ರೀಮಿಯ‌ರ್ ಶೋ ವೇಳೆ ಚಿತ್ರಮಂದಿರವೊಂದರ ಬಳಿ ಉಂಟಾದ ಭಾರಿ ನೂಕು ನುಗ್ಗಲಿನಿಂದ ಮಹಿಳೆಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅವರ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಘಟನೆ ಬುಧವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೆಚ್ಚಿನ ನಟನನ್ನು ನೋಡಲು ಅಪಾರ ಸಂಖ್ಯೆಯ
ಅಭಿಮಾನಿಗಳು ಚಿತ್ರಮಂದಿರದಲ್ಲಿ
ಜಮಾಯಿಸಿದ್ದರು. ಅಲ್ಲು ಅರ್ಜುನ್ ಹಾಗೂ ಚಿತ್ರದ
ಇತರ ನಟರ ಆಗಮನದ ಬಗ್ಗೆ ಪೂರ್ವ ಮಾಹಿತಿ
ಇರಲಿಲ್ಲ .ಮುಂಜಾಗ್ರತೆಯಾಗಿ ಥಿಯೇಟರ್ ನವರು ಕೂಡಾ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


Share It

You cannot copy content of this page