ನವದೆಹಲಿ: ಮಕ್ಕಳು ವಯಸ್ಕರಾಗಿದ್ದು ಶಿಕ್ಷಣದ ನಂತರ ಉದ್ಯೋಗ ಮಾಡುತ್ತಿದ್ದರೂ ತಂದೆ ತನ್ನ ಮಕ್ಕಳಿಗೆ ಕಡ್ಡಾಯವಾಗಿ ಸಮಾನ ಮತ್ರು ನ್ಯಾಯಯುತವಾಗಿ ಜೀವನಾಂಶದ ಹಂಚಕೆ ಮಾಡಬೇಕು ಸುಪ್ರೀಂಕೋರ್ಟ್ ಹೇಳಿದೆ.
ಪತ್ನಿಯಿಂದ ಬೇರ್ಪಟ್ಟು 2 ದಶಕ ಕಳೆದಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರ 1998ರ ವಿವಾಹವನ್ನು ಅನೂರ್ಜಿತಗೊಳಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ನ್ಯಾಯಪೀಠ,ಪತ್ನಿಗೆ 5 ಕೋಟಿ ರೂ.ಪರಿಹಾರ ಮತ್ತು ಎಂಜಿನಿಯರಿಂಗ್ ಪದವಿ ಮುಗಿಸಿದ 23 ವರ್ಷದ ಮಗನಿಗೆ 1 ಕೋಟಿ ರೂ.ನೀಡುವಂತೆ ನಿರ್ದೇಶನ ನೀಡಿದೆ.
ಪದವಿ,ಸ್ನಾತಕೋತ್ತರ ಅಥವಾ ವೃತ್ತಿಪರ ಕೋಸ್೯ ಪೂರ್ಣಗೊಳಿಸಿದ ನಂತರ ಮಾತ್ರ ಮಕ್ಕಳು ಉತ್ತಮ ವೇತನದ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ ಎಂಬ ದೆಹಲಿ ಹೈಕೋರ್ಟ್ ಅಭಿಪ್ರಾಯವನ್ನು ಸುಪ್ರೀಂ ಕೋಟ್೯ ಎತ್ತಿಹಿಡಿದಿದೆ. ಅಲ್ಲದೆ ಎಂಜಿನಿಯರಿಂಗ್ ಪದವಿ ಮುಗಿಸಿದ ಮಾತ್ರಕ್ಕೆ ಉತ್ತಮ ಸಂಬಳದ ಉದ್ಯೋಗ ಸಿಗುತ್ತದೆ ಎಂಬ ವಿಶ್ವಾಸ ಇರುವುದಿಲ್ಲ ಎಂಬುದನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ಏನಿದು ಪ್ರಕರಣ?: ತಂದೆ ದುಬೈನಲ್ಲಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು ತಿಂಗಳಿಗೆ 10 ರಿಂದ 12 ಲಕ್ಷ ರೂ. ವೇತನ ಹೊಂದಿದವರಾಗಿದ್ದಾರೆ. 2010 ರಿಂದ ತಮ್ಮ ಡಿಮ್ಯಾಟ್ ಖಾತೆಗಳ ವಿವರಗಳನ್ನು ಸಲ್ಲಿಸಿದ್ದಾರೆ ಮತ್ತು ಸುಮಾರು 10 ಕೋಟಿ ರೂ.ಮೌಲ್ಯದ 3 ಆಸ್ತಿಗಳನ್ನು ಹೊಂದಿದ್ದಾರೆ ಎಂಬ ಮಾಹಿತಿಯನ್ನು ಕೋಟ್೯ ಮನಗಂಡಿದೆ.