ಮಹಾರಾಷ್ಟ್ರ: ಥಾಣೆಯಲ್ಲಿ 12 ವರ್ಷದ ಬಾಲಕಿಯನ್ನು ಅಪಹರಿಸಿ,ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ವಿಶಾಲ್ ಗಾವ್ಲಿಯನ್ನು ಬುಧವಾರ ಬಂಧಿಸಿರುವ ಪೊಲೀಸರು ಇಂದು ಬೆಳಗ್ಗೆ ಥಾಣೆ ನ್ಯಾಯಾಲಯದ ಮುಂದೆ ವಹಾಜರುಪಡಿಸಿದರು. ವಿಚಾರಣೆ ನಡೆಸಿದ ಕಲ್ಯಾಣ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿ.ಎ ಪತ್ರವಾಲೆ ಅವರು, ಆರೋಪಿಯನ್ನು 2025ರ ಜನವರಿ 2ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.
ಮಂಗಳವಾರ ಥಾಣೆ ಜಿಲ್ಲೆಯ ತವರುಮನೆ ಕಲ್ಯಾಣ್ ಸಮೀಪದ ಗ್ರಾಮದಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು ಬಾಲಕಿಯನ್ನು ಅಪಹರಿಸಿ, ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ವಿಶಾಲ್ ಗಾವ್ಲಿಯ ಆತನ ಪತ್ನಿ ಸಾಕ್ಷಿ ಗಾವ್ಲಿ ಸೇರಿ ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದರು.