ಸುದ್ದಿ

ಮೂರು ವರ್ಷದೊಳಗೆ ಬಿಡಿಎ ಸೈಟಲ್ಲಿ ಮನೆ ಕಟ್ಟದಿದ್ದರೆ ದಂಡ!

Share It

ಬೆಂಗಳೂರು: ಸ್ವಂತದೊಂದು ಮನೆ ಕಟ್ಟಿಕೊಳ್ಳಲಿ ಎಂದು ಬಿಡಿಎ ಬಡಾವಣೆಗಳನ್ನು ನಿರ್ಮಾಣ ಮಾಡಿ ಕಡಿಮೆ ದರಕ್ಕೆ ನಿವೇಶನಗಳನ್ನು ಹಂಚಿಕೆ ಮಾಡಿದೆ. ಆದರೆ, ಶ್ರೀಮಂತರು, ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ದಲ್ಲಾಳಿಗಳು ಇವುಗಳನ್ನು ಖರೀದಿಸಿ, ನಂತರ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಹಾಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿವೇಶನ ಖರೀದಿ ಮಾಡಿದವರು ಮೂರು ವರ್ಷದಲ್ಲಿ ಮನೆ ಕಟ್ಟದೆ ಒಪ್ಪಂದದ ನಿಯಮ ಉಲ್ಲಂಘಿಸಿ ದವರಿಗೆ ನಿವೇಶನದ ಮಾರ್ಗಸೂಚಿ ದರದ ಶೇ.10ರಷ್ಟು ದಂಡ ಪಾವತಿ ಕಡ್ಡಾಯವಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ಮತ್ತು ಅರ್ಕಾವತಿ ಬಡಾವಣೆ ಹೊರತುಪಡಿಸಿ ಬಿಡಿಎ ನಿರ್ಮಿಸಿರುವ 64 ಬಡಾವಣೆಗಳು ಇದರ ವ್ಯಾಪ್ತಿಗೆ ಬರುತ್ತವೆ. 2024 ಸೆ.23ರಿಂದ ಅನ್ವಯವಾಗುವಂತೆ ಮಾರ್ಗಸೂಚಿ ದರದ ಶೇ.10ರಷ್ಟು ದಂಡ ನಿಗದಿಪಡಿಸಲಾಗಿದೆ. ಆದರೆ, 2025ರಿಂದ ಕಟ್ಟುನಿಟ್ಟಾಗಿ ವಸೂಲಿ
ನಡೆಯಲಿದೆ ಎನ್ನಲಾಗಿದೆ.

ಇನ್ನೂ ಯಾವ ನಿವೇಶನಗಳು ತಕರಾರಿನಿಂದ ಕೂಡಿರುತ್ತವೆಯೋ ಅಂತಹ ನಿವೇಶನಗಳಿಗೆ ದಂಡದಿಂದ ವಿನಾಯಿತಿ ಸಿಗಲಿದೆ. ಉಳಿದಂತೆ ಲೀಸ್ ಕಂ ಅಗ್ರಿಮೆಂಟ್ ಆಗಿ ಮೂರು ವರ್ಷ ಮೀರಿದ ಎಲ್ಲಾನಿವೇಶನಗಳಿಗೆ ಇದು ಅನ್ವಯವಾಗಲಿದೆ. ಬಿಡಿಎ ಕಾಯ್ದೆ ಪ್ರಕಾರ ನಿಗದಿತ ಅವಧಿಯಲ್ಲಿ ಮನೆ ನಿರ್ಮಿಸದಿದ್ದರೆ ಅಂತಹ ನಿವೇಶನಗಳನ್ನು ವಶಪಡಿಸಿಕೊಳ್ಳವ ಅಧಿಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಇದೆ. ಆದರೆ, ಬಿಡಿಎ ಕ್ರಮವನ್ನು ಪ್ರಶ್ನಿಸಿ ಈ ಹಿಂದೆ ಕೆಲ ಗ್ರಾಹಕರು ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ನಿವೇಶನ ವಾಪಸ್ ಪಡೆಯದೆ ದಂಡ ವಸೂಲಿಗೆ ನಿರ್ಧರಿಸಲಾಗಿದೆ.


Share It

You cannot copy content of this page