ದೇವನಹಳ್ಳಿ: ಕ್ಯಾಂಟೀನ್ ಸಿಬ್ಬಂದಿ ಕಾಫಿ ಬಿಲ್‌ನ ಟೋಕನ್ ಕೇಳಿದ್ದಕ್ಕೆ ಸಿಟ್ಟಾದ ಮೂವರು ಪೊಲೀಸರು ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾ ಣದ ಆವರಣದಲ್ಲಿರುವ ಆಲ್ಫಾ ಕ್ಯಾಂಟೀನ್‌ನಲ್ಲಿ ನಡೆದಿದೆ.
ರಾತ್ರಿ ಬೀಟ್‌ನಲ್ಲಿದ್ದ ವಿಮಾನ ನಿಲ್ದಾಣ ಠಾಣೆ ಪೇದೆಗಳಾದ ಗಂಗರಾಜು, ಬಾಳಪ್ಪ ಹಾಗೂ ಕುಮಾರ್ ಮೂವರು ಕ್ಯಾಂಟೀನ್‌ನಲ್ಲಿ ಕಾಫಿ ಕುಡಿಯಲು ಹೋದ ವೇಳೆ ಸಿಬ್ಬಂದಿ ಹಣಕೊಟ್ಟು ಕೌಂಟರ್ ನಲ್ಲಿ ಟೋಕನ್ ಕೇಳಿದ್ದಕ್ಕೆ ‘ನಾವು ಪೊಲೀಸರು, ನಾವ್ಯಾಕೆ ಟೋಕನ್ ತರಬೇಕು ಎಂದು ಪ್ರಶ್ನಿಸಿದ್ದಾರೆ ಅಲ್ಲದೆ,
ಇಷ್ಟೊತ್ತಿನ ವರೆಗೂ ಕ್ಯಾಂಟೀನ್ ತೆರೆದಿರುವುದೇ ತಪ್ಪೆಂದು ಪೇದೆ ಗಂಗರಾಜು ಕೈಮುಷ್ಠಿ ಕಟ್ಟಿ ಸಿಬ್ಬಂದಿ ಸೈಫುಲ್ಲಾ ಮುಖಕ್ಕೆ ಹೊಡೆದು ಹಲ್ಲೆ ಮಾಡಿದ್ದಾರೆ. ತಡೆಯಲು ಬಂದ ರಾಜೇಶ್, ದಿಲ್ದಾರ್‌ಗೂ ಬೆದರಿಕೆ ಹಾಕಿ ನಿಂದಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ದೃಶ್ಯ ಕ್ಯಾಂಟೀನ್ ಸಿಸಿಟಿಯಲ್ಲಿ ದಾಖಲಾಗಿವೆ. ಈ ಘಟನೆ ಸಂಬಂಧ ಮೂವರು ಪೇದೆಗಳ ವಿರುದ್ಧ ದೂರು ದಾಖಲಾಗಿದೆ.