ಸುದ್ದಿ

ವೈ.ಎಸ್.ವಿ ದತ್ತ ಅವರಿಗೆ ‘ಶಾಂತವೇರಿ ಗೋಪಾಲಗೌಡ’ ಪ್ರಶಸ್ತಿ

Share It

ಬೆಂಗಳೂರು: ಕನ್ನಡ ಜನಶಕ್ತಿ ಕೇಂದ್ರ ಕೊಡಮಾಡುವ 2026ನೇ ಸಾಲಿನ ‘ಶಾಂತವೇರಿ ಗೋಪಾಲಗೌಡ’ ಪ್ರಶಸ್ತಿಗೆ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರು ಆಯ್ಕೆಯಾಗಿದ್ದಾರೆ.

ಪ್ರತಿ ವರ್ಷ ನಾಡು-ನುಡಿಗೆ ಅನನ್ಯ ಸೇವೆ ಸಲ್ಲಿಸಿರುವ ನಾಡಿನ ಗಣ್ಯರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ 25 ಸಾವಿರ ರು.ನಗದು, ಕಂಚಿನ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳ ಗೊಂಡಿದೆ.

ವೈಎಸ್‌ವಿ ದತ್ತ ಅವರು 2006ರಿಂದ 2012ರವರೆಗೆ ವಿಧಾನ ಪರಿಷತ್ತಿನ ಸದಸ್ಯರಾಗಿ, 2013ರಲ್ಲಿ ಕಡೂರು ಕ್ಷೇತ್ರದ ಶಾಸಕರಾಗಿ, ಜೆಡಿಎಸ್‌ ಶಾಸಕಾಂಗ ಪಕ್ಷದ ಉಪನಾಯಕರಾಗಿ ಕೆಲಸ ಮಾಡಿದ್ದಾರೆ. ಮಾ.14ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.


Share It

You cannot copy content of this page