ಸುದ್ದಿ

ಜ್ಯೋತಿಷಿ ಕಮಲಾಕರ ಭಟ್ & ಗ್ಯಾಂಗ್ ಕೊಲೆ ಪ್ರಕರಣ:ಆರೋಪಿಗಳಿಗೆ ಫೆ.21ರವರೆಗೆ ಜೈಲು

Share It

ಸಿದ್ದಾಪುರ: ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನಲ್ಲಿ ನಡೆದಿದ್ದ ವಸಂತ ನಾಯ್ಕ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಜ್ಯೋತಿಷಿ ಕಮಲಾಕರ ಭಟ್ ಹಾಗೂ ಸುಚಿತ್ರಾ ಸೇರಿ ಐವರು ಆರೋಪಿಗಳಿಗೆ ಫೆ. 21ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

ಬಂಧಿತ 8 ಆರೋಪಿಗಳ ಪೈಕಿ ಈ ಐವರ ನ್ಯಾಯಾಂಗ ಬಂಧನದ ಅವಧಿ ಬುಧವಾರಕ್ಕೆ ಮುಕ್ತಾಯವಾಗಿತ್ತು. ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಐವರನ್ನು ವಿಡಿಯೋ ಕಾನ್ಸರೆನ್ಸ್ ಮೂಲಕ ವಿಚಾರಣೆಗೆ ಒಳಪಡಿಸಿದರು. ನ್ಯಾಯಾಂಗ ಬಂಧನದ ಅವಧಿ ಫೆ.21ರವರೆಗೆ ವಿಸ್ತರಿಸಿದರು. ಉಳಿದ ಮೂವರು ಪೊಲೀಸ್ ಕಸ್ಟಡಿಯಲ್ಲಿದ್ದು, ಫೆ.13ಕ್ಕೆ ಅವರ ಪೊಲೀಸ್ ಕಸ್ಟಡಿಯ ಅವಧಿ ಮುಕ್ತಾಯವಾಗಲಿದೆ.


Share It

You cannot copy content of this page