ಸುದ್ದಿ

ಕಾಮೆಡ್‌-ಕೆ: ಫೆಬ್ರವರಿ 3ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ

Share It

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯ ಕಾಲೇಜುಗಳ ಒಕ್ಕೂಟ(ಕಾಮೆಡ್-ಕೆ) ರಾಜ್ಯದ 150ಕ್ಕೂ ಹೆಚ್ಚು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ದೇಶದ ವಿವಿಧ ವಿಶ್ವವಿದ್ಯಾಲಗಳ ಲ್ಲಿನ ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಮೇ 10ರಂದು ಕಾಮೆಡ್‌ -ಕೆ ಯೂನಿಗೇಜ್ ಪರೀಕ್ಷೆ-2025 ನಡೆಸಲಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಕಾಮೆಡ್‌-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಕುಮಾರ್ ಮಾಹಿತಿ ನೀಡಿ, 20 ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟುಗಳ ಪ್ರವೇಶಕ್ಕೆ ನಡೆಸುವ ಕಾಮೆಡ್-ಕೆ ಯೂನಿಗೇಜ್ ಪರೀಕ್ಷೆಗೆ ಫೆ.3ರಿಂದ 15ರವರೆಗೆ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ ಮೂಲಕ ದೇಶದ 200ಕ್ಕೂ ಹೆಚ್ವು ನಗರಗಳಲ್ಲಿ 400ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ.


Share It

You cannot copy content of this page