ಶಿವಣ್ಷ ಜಿ.ಬಿ ಅವರಿಗೆ ಪಿಎಚ್.ಡಿ ಪದವಿ
ದಾವಣಗೆರೆ: ಡಾ.ಜಯರಾಮಯ್ಯ.ವಿ ಅವರ
ಮಾರ್ಗದರ್ಶನದಲ್ಲಿ ದಾವಣಗೆರೆ ಜಿಲ್ಲೆ, ದಾವಣಗೆರೆ ತಾಲೂಕು, ಆಲೂರು ಗ್ರಾಮದ ಗುಡಾಳ್ ಬಸಪ್ಪ ಮತ್ತು ಮಲ್ಲಮ್ಮ ಇವರ ಪುತ್ರರಾದ ಶಿವಣ್ಣ ಜಿ. ಬಿ ಅವರು ಕನ್ನಡ ಸಾಹಿತ್ಯ ವಿಷಯದಲ್ಲಿ ಸಲ್ಲಿಸಿದ “ನವ್ಯ ಕಾದಂಬರಿಗಳಲ್ಲಿ ವಾಸ್ತವತಾವಾದ “(ಆಯ್ದ ಕಾದಂಬರಿಕಾರರನ್ನು ಅನುಲಕ್ಷಿಸಿ ) ಎಂಬ ಸಂಶೋಧನಾ ಮಹಾಪ್ರಬಂಧವನ್ನು ದಿನಾಂಕ: 27.01.2025 ರಂದು ದಾವಣಗೆರೆ ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.
ಪಿಎಚ್.ಡಿ ಪದವಿ ಪಡೆದ ಶಿವಣ್ಣ ಜಿ. ಬಿ.ರವರಿಗೂ ಮತ್ತು ಮಾರ್ಗದರ್ಶಕರಾದ ಡಾ. ಜಯರಾಮಯ್ಯ ವಿ.ರವರಿಗೂ ದಾವಣಗೆರೆ ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳ ಸಂಘ ಮತ್ತು ಕನ್ನಡ ಅಧ್ಯಯನ ವಿಭಾಗ ಅಭಿನಂದಿಸುತ್ತದೆ.