ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ನಾತ
ಕೋತ್ತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಮಾಪ್ ಅಪ್ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವ ತಿಸಲು ಫೆ.7ರವರೆಗೆ ದಿನಾಂಕ ವಿಸ್ತರಿಸಿದೆ. ಈಗಾಗಲೇ ಶುಲ್ಕ ಪಾವತಿಸಿದವರು, ಫೆ.8ರೊಳಗೆ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು, ಕಾಲೇಜುಗಳಿಗೆ ವರದಿ ಮಾಡಿ ಕೊಳ್ಳಬಹುದು ಎಂದು ಪ್ರಾಧಿಕಾರ ತಿಳಿಸಿದೆ.
ಎಂಪಿಟಿ, ಎಂಎಸ್ಸಿ ಅಲೈಡ್
ಹೆಲ್ತ್ ಸೈನ್ಸ್ ಕೋರ್ಸುಗಳ ಪ್ರವೇಶಕ್ಕೆ ಸರ್ಕಾರದಿಂದ ಹೆಚ್ಚು ವರಿ ಸೀಟುಗಳು ಮಂಜೂರಾಗಿರುವ ಕಾರಣ ಅವುಗಳ ಭರ್ತಿಗೆ ಅಂತಿಮ ಸುತ್ತಿನ ಸೀಟು ಹಂಚಿಕೆಯನ್ನು ಬುಧ ವಾರದಿಂದ ಆರಂಭಿಸಲಾಗಿದೆ. ಫೆ.7ರ ಬೆಳಗ್ಗೆ 11ರವರೆಗೆ ಆಪ್ಸನ್ಸ್ ದಾಖಲಿಸಲು ಅವಕಾಶ ನೀಡಲಾ ಗಿದೆ. ಅದೇ ದಿನ ಸಂಜೆ 5ಕ್ಕೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗು ವುದು. ಫೆ.8ರಿಂದ 10ರವರೆಗೆ ಶುಲ್ಕ ಪಾವತಿಸಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಇದುವರೆಗೂ ಸೀಟು ಹಂಚಿಕೆ ಯಾಗದವರು ಮಾತ್ರ ಈ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಪ್ರಾಧಿಕಾರ ತಿಳಿಸಿದೆ