ಸುದ್ದಿ

ಲಂಚ: ಮಹಿಳಾ ಇನ್‌ಸ್ಪೆಕ್ಟರ್ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ

Share It

ಬೆಂಗಳೂರು: ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಹಂಚಿಕೆಯಾಗಿರುವ ಮನೆ ಹಕ್ಕು ಪಡೆಯಲು ಜಾತಿ ಪ್ರಮಾಣ ಪತ್ರ ದಾಖಲೆ ನೀಡಲು  ಲಂಚ ಪಡೆದ ಆರೋಪದ ಮೇಲೆ ಮಹಿಳಾ ಪೊಲೀಸ್ ಇನ್‌ಸ್ಪೆಕ್ಟ‌ರ್ ಸೇರಿದಂತೆ  ಇಬ್ಬರು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಡಿಸಿಆರ್‌ಇ ಪೊಲೀಸ್‌ ಇನ್‌ಸ್ಪೆಕ್ಟ‌ರ್ ಗೀತಾ ಮತ್ತು ಖಾಸಗಿ ವ್ಯಕ್ತಿ ರಿಚರ್ಡ್ ಬಂಧಿತರು ಪಿ.ಜಿ.ಲೋಕೇಶ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಕರ್ನಾಟಕ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ವತಿ ಮನೆ ಹಕ್ಕು ಪಡೆ ಯಲು ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕಾಗಿತ್ತು. ಇದ ಕ್ಕಾಗಿ ದಾಖಲೆ ನೀಡುವಂತೆ ದೂರುದಾರರು ಮನವಿ ಸಲ್ಲಿಸಿದ್ದರು. ದಾಖಲೆ ನೀಡಲು ₹25 ಸಾವಿರ ಲಂಚ ನೀಡುವಂತೆ ಆರೋಪಿಗಳು ಕೇಳಿದ್ದರು. ಈ ಸಂಬಂಧ ದೂರುದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.


Share It

You cannot copy content of this page