ಬೆಂಗಳೂರು: ಅಂತಿಮ ಇ-ಖಾತಾ ಪಡೆಯಬೇಕಾದರೆ ಅಗತ್ಯ ದಾಖಲಾತಿ ಹಾಗೂ ಆಸ್ತಿಯ ಜಿಪಿಎಸ್ ಆಧಾರಿತ ಫೋಟೋ ನೀಡುವುದನ್ನು ಬಿಬಿಎಂಪಿ ಕಡ್ಡಾಯವಾಗೊಳಿಸಿದೆ.
ಬಿಬಿಎಂಪಿಯು ಇ- ಖಾತಾ ವ್ಯವಸ್ಥೆಯನ್ನು ನಾಗರೀಕರಿಗೆ ಅನೂಕಲವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಅಂತಿಮ ಇ-ಖಾತಾ ರಚಿಸಬೇಕಾದರೆ, ಆಸ್ತಿ ಮಾಲೀಕರ ಮಾಹಿತಿ ವಿವರದ ದಾಖಲಾತಿಗಳು ಹಾಗೂ ಆಸ್ತಿಯ ಫೋಟೋ ನೀಡುವುದು ಕಡ್ಡಾಯವಾಗಿದೆ.ನೀಡದಿದ್ದರೆ ಅಂತಿಮ ಇ-ಖಾತಾ ರಚನೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.
ಈಗಾಗಲೇ ನಗರದ ಸುಮಾರು 22 ಲಕ್ಷ ಆಸ್ತಿಗಳ ಕರಡು ಇ-ಖಾತಾ ಅನ್ನು ಬಿಬಿಎಂಪಿಯ BBMPe Aasthi.karnataka.gov.in ವೆಬ್‌ಸೈಟ್ ನಲ್ಲಿ ವಾಡ್೯ವಾರು ಪ್ರಕಟಿಸಲಾಗಿದೆ. ಆಸ್ತಿ ತೆರಿಗೆ ರಶೀದಿಯಿಂದ ತಮ್ಮ ವಾಡ್೯ ತಿಳಿದುಕೊಳ್ಳಬಹುದು. ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿ ಮತ್ತು ವಾಡ್೯ವಾರು ಪಟ್ಟಿಯಲ್ಲಿ ಮಾಲೀಕರ ಹೆಸರನ್ನು ಬಳಸಿಕೊಂಡು ತಮ್ಮ ಆಸ್ತಿಯನ್ನು ಹುಡುಕಿಕೊಳ್ಳಬಹುದಾಗಿದೆ. ಬಿಬಿಎಂಪಿ ದಾಖಲೆಗಳೊಂದಿಗೆ ತಮ್ಮ ದಾಖಲಾತಿಗಳು ಹೊಂದಾಣಿಕೆಯಾದರೆ ಅಂತಿಮ ಇ-ಖಾತಾ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.