ಸುದ್ದಿ

ಪಾಕ್ ಮಹಿಳೆ ಜೊತೆಗಿನ ವಿವಾಹವನ್ನು ಮುಚ್ಚಿಟ್ಟಿದ್ದ ಸಿಆರ್‌ಪಿಎಫ್‌  ಯೋಧ ವಜಾ

Share It

ಹೊಸದಿಲ್ಲಿ: ಸೇವಾ ನಡವಳಿಕೆಯನ್ನು ಉಲ್ಲಂಘಿಸಿ ಪಾಕಿಸ್ತಾನ ಮಹಿಳೆಯ ಜೊತೆ ವಿವಾಹವಾಗಿದ್ದ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ ಯೋಧನೊಬ್ಬನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

41ನೇ ಬಟಾಲಿಯನ್‌ನ ಯೋಧ ಮುನೀರ್ ಅಹ್ಮದ್ ವಜಾಗೊಂಡ ಸಿಆರ್‌ಪಿಎಫ್ ಯೋಧನಾಗಿದ್ದು ಇವರು ಸಿಆರ್‌ಪಿಎಫ್‌ನ ಅನುಮತಿ ಪಡೆಯದೆ ಪಾಕ್ ಪ್ರಜೆಯಾದ ಮಿನಾಲ್ ಖಾನ್‌ಳನ್ನು ವಿವಾಹವಾಗಿದ್ದರು.

ತನ್ನ ಪತ್ನಿಯ ವೀಸಾ ಅವಧಿ ಮುಕ್ತಾಯಗೊಂಡಿರುವುದು ತಿಳಿದ ಬಳಿಕವೂ ಆಕೆಗೆ ಆಶ್ರಯ ನೀಡಿದ್ದ ಗಂಭೀರ ಆರೋಪದ ಜೊತೆಗೆ. ಯೋಧನಿಂದ ಸೇವಾ ನಡವಳಿಕೆಯ ಉಲ್ಲಂಘನೆಯಾಗಿದೆ ಹಾಗೂ ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವಾಗಿದೆಯೆಂದು ಸಿಆರ್‌ಪಿಎಫ್ ಹೇಳಿಕೆ ತಿಳಿಸಿದೆ.

ಪಹಲ್ಲಾಮ್ ಭಯೋತ್ಪಾದಕ ದಾಳಿಯ ಆನಂತರ ಭಾರತವು ಪಾಕಿಸ್ತಾನದ ವಿರುದ್ಧ ಕೈಗೊಂಡ ರಾಜತಾಂತ್ರಿಕ ನಿರ್ಬಂಧಗಳ ಭಾಗವಾಗಿ ಪಾಕ್ ಪ್ರಜೆಗಳು ದೇಶವನ್ನು ತೊರೆಯುವಂತೆ ಭಾರತವು ಆದೇಶಿಸಿತ್ತು. ಈ ಸಂದರ್ಭದಲ್ಲಿ ಪಾಕ್ ಮಹಿಳೆಯ ಜೊತೆ ಅಹ್ಮದ್ ವಿವಾಹವಾಗಿರುವುದು ಬೆಳಕಿಗೆ ಬಂದಿತ್ತು.

ಪಾಕಿಸ್ತಾನದ ಸಿಯಾಲ್‌ಕೋಟ್ ನಿವಾಸಿ ಮಿನಾಲ್ ಖಾನ್‌ಳನ್ನು ವಿವಾಹವಾಗಲು ಮುನೀರ್ 2023ರಲ್ಲಿ ಸಿಆರ್‌ಪಿಎಫ್‌ನಿಂದ ಅನುಮತಿ ಕೋರಿದ್ದ ಯೋಧ, ಮನವಿಗೆ ಅಧಿಕಾರಿಗಳು ಪ್ರತಿಕ್ರಿಯಿಸುವ ಮೊದಲೇ 2024ರ ಮೇ 24ರಂದು ವೀಡಿಯೊ ಕಾನ್ಸರೆನ್ಸ್ ಮೂಲಕ ಆಕೆಯನ್ನು ವಿವಾಹವಾಗಿದ್ದರು.
ವಿವಾಹದ ಬಳಿಕ ಆಕೆಯ ವೀಸಾ ಅವಧಿ ಮುಕ್ತಾಯಗೊಂಡ ಆನಂತರವೂ ಆಕೆ ಭಾರತದಲ್ಲೇ ಉಳಿದುಕೊಂಡಿದ್ದಳು ಎಂದು ವರದಿಯಾಗಿದೆ.


Share It

You cannot copy content of this page