ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡು
ತ್ತಿದ್ದ ಆರೋಪದ ಮೇಲೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ನ ಸಿಬ್ಬಂದಿ ಮೋತಿರಾಂ ಜಾಟ್ ಎಂಬಾತ ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.
ಆರೋಪಿ ಮೋತಿ ರಾಮ್ ಜಾಟ್ ಸಿಆರ್‌ಪಿಎಫ್‌ನ 16ನೇ ಬೆಟಾಲಿಯನ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು 2023ರಿಂದ ಭಾರತದ ಭದ್ರತೆಗೆ ಸಂಬಂಧಿಸಿದಂತೆ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮದ ಮೂಲಕ ಪಾಕ್ ಅಧಿಕಾರಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದ.ಈತ ತಾನು ಕೊಡುತ್ತಿದ್ದ ಮಾಹಿತಿಗೆ ಬದಲಿಯಾಗಿ ಪಾಕಿಸ್ತಾನದಿಂದ ಹಲವು ಮಾಧ್ಯಮಗಳ ಮೂಲಕ ಭಾರಿ ಪ್ರಮಾಣದ ಹಣವನ್ನು ಪಡೆಯುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೆಹಲ್ಗಾಮ್ ಘಟನೆಯ ಬಳಿಕ ಆಪರೇಷನ್ ಸಿಂಧೂರ ಸೇನೆ ಮತ್ತು ಎನ್‌ಐಎ ನಡೆಸಿದ ಕಾರ್ಯಾಚರಣೆ ಯಲ್ಲಿ ಮೇ 21ರಂದು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಳಿಕ ಎನ್‌ಐಎ ಈತನನ್ನು ವಶಕ್ಕೆ ಪಡೆದಿದ್ದು, ಪಟಿಯಾಲಾ ಹೌಸ್ ಡಿ ಕೋರ್ಟ್ ಜೂ.6ರವರೆಗೆ ಎನ್‌ಐಎ ವಶಕ್ಕೆ ನೀಡಿ ಆದೇಶಿಸಿದೆ.