ಬೆಳಗಾವಿ: ಬೆಳಗಾವಿ ನಗರದ ಖಾಸಗಿ ವೈದ್ಯಕೀಯ ಕಾಲೇಜಿಗೆ ಅನುಕೂಲಕರ ತಪಾಸಣಾ ವರದಿ ನೀಡಲು 10 ಲಕ್ಷ ರೂ. ಲಂಚ ಪಡೆಯುತ್ತಿದ್ದ ರಾಷ್ಟ್ರೀಯ ವೈದ್ಯಕೀಯ ಆಯೋಗದ(ಎನ್‌ಎಂಸಿ) ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಿರುವ
ಹಿರಿಯ ವೈದ್ಯರನ್ನು ಸಿಬಿಐ ಬಂಧಿಸಿದೆ.
ಎನ್‌ಎಂಸಿ ವೈದ್ಯರ ಬಂಧನಕ್ಕೆ ಸಂಬಂಧಿಸಿದಂತೆ ಸಿಬಿಐ ನಡೆಸಿದ ಶೋಧದ ವೇಳೆ ಕನಿಷ್ಠ 44.6 ಲಕ್ಷ ರೂ. ಹೆಚ್ಚುವರಿ ನಗದು ಪತ್ತೆಯಾಗಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ)ದಲ್ಲಿ ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪಿ ವೈದ್ಯರು, ಅನುಕೂಲಕರ ತಪಾಸಣಾ ವರದಿಯನ್ನು ನೀಡಲು ಖಾಸಗಿ ವೈದ್ಯಕೀಯ ಕಾಲೇಜಿನ ಪ್ರತಿನಿಧಿಗಳಿಂದ 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ ಮೇ 24 ರಂದು ಈಗ ಬಂಧಿತ ವೈದ್ಯನ ಜೊತೆ ಮೂವರು ಆರೋಪಿಗಳು ಸೇರಿದಂತೆ ಖಾಸಗಿ ವೈದ್ಯಕೀಯ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದೆ.