ನವದೆಹಲಿ: ಬಾಂಗ್ಲಾದೇಶ ಮತ್ತು
ನೇಪಾಳದಲ್ಲಿ ಸಂವಿಧಾನ ವೈಫಲದಿಂದ ನಡೆದ ನಾಗರಿಕ ದಂಗೆಗಳನ್ನು ಉಲ್ಲೇಖಿಸಿರುವ ಸುಪ್ರೀಂಕೋರ್ಟ್ ಸ್ಥಿರತೆಯನ್ನು ಕಾಯ್ದುಕೊಂಡಿರುವ ಭಾರತದ ಸಂವಿಧಾನದ ಬಗ್ಗೆ ಹೆಮ್ಮೆ ಮೂಡುತ್ತದೆ ಎಂದು ಹೇಳಿದೆ.
ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಒಪ್ಪಿಗೆಯ ಸಮಯಾವಧಿಯ ನಿಗದಿ ಕುರಿತ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.
ಭಾರತದ ಸಂವಿಧಾನದ ಸ್ಥಿರತೆಯನ್ನು ಒತ್ತಿ ಹೇಳಿರುವ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ‘ನೆರೆ ದೇಶವಾದ ನೇಪಾಳದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ಗಮನಿಸಿದಾಗ ನಮ್ಮ ಸಂವಿಧಾನದ ಬಗ್ಗೆ ಹೆಮ್ಮೆ ಮೂಡುತ್ತದೆ’ ಎಂದರು. ಆಗ ಮಧ್ಯಪ್ರವೇಶಿಸಿದ ನ್ಯಾ.ವಿಕ್ರಂನಾಥ್, ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ
ನೇತೃತ್ವದ ಮುಷ್ಕರವನ್ನು ಉದಾಹರಣೆಯಾಗಿ ನೀಡಿದರು.
ಈ ಎರಡೂ ಘಟನಾವಳಿಗಳನ್ನು ಅಲ್ಲಿನ ಸಂವಿಧಾನದ ವೈಫಲ್ಯ ಎಂದು ಹೇಳಿದ ನ್ಯಾಯಪೀಠ, ಇಂತಹ ವೈಫಲ್ಯಗಳು ಒಂದು ರಾಷ್ಟ್ರದಲ್ಲಿ ಏನೆಲ್ಲಾ ಗೊಂದಲ, ಅರಾಜಕತೆಗಳನ್ನು ಸೃಷ್ಟಿಸಬಹುದು ಎಂಬುದಕ್ಕೆ ಉದಾ ಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿತು.