ನವದೆಹಲಿ: ವಿಚ್ಛೇದಿತ ಮಹಿಳೆಗೆ ಜೀವನಾಂಶ ಒದಗಿಸುವಾಗ ಪತಿಯ ಆರ್ಥಿಕ ಸಾಮರ್ಥ್ಯ ಹಾಗೂ ಪತ್ನಿಯ ಅಗತ್ಯಗಳ ನಡುವೆ ಸಮತೋಲಿತ ಧೋರಣೆ ಅನುಸರಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ಸಂದೀಪ್ ಮೆಸ್ತಾ ಅವರಿದ್ದ ನ್ಯಾಯಪೀಠ, ವೃತ್ತಿಯಲ್ಲಿ ವೈದ್ಯನಾಗಿರುವ ಪತಿಯು ಎಂಟೆಕ್ ಮತ್ತು ಎಲ್‌ಎಲ್‌ಬಿ ಪದವಿಗಳನ್ನು ಹೊಂದಿರುವ ಪತ್ನಿಗೆ ನೀಡಬೇಕಾದ ಕಾಯಂ ಪರಿಹಾರವನ್ನು ₹15 ಲಕ್ಷ ರೂಪಾಯಿಗಳಿಂದ ₹ 50 ಲಕ್ಷ ರೂಪಾಯಿಗೆ ಏರಿಸುವ ಸಂದರ್ಭದಲ್ಲಿ ಪತಿಗೆ ಹೆಚ್ಚಿನ ಮೊತ್ತ ಪಾವತಿಸುವ ಸಾಮರ್ಥ್ಯವಿದೆ ಎಂಬುದನ್ನು ಗಮನಿಸಿದ ಸುಪ್ರೀಂಕೋರ್ಟ್ ವಿಚ್ಛೇದನ ಮಂಜೂರು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಿತು.
ಆದರಂತೆ ಕರ್ನಾಟಕ ಹೈಕೋರ್ಟ್ ನಿಗದಿಪಡಿಸಿದ್ದ ಪರಿಹಾರವನ್ನು 50 ಲಕ್ಷ ರೂ.ಗೆ ಏರಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ.