ಸುದ್ದಿ

ಆರ್‌ಟಿಐ ಅರ್ಜಿಗೆ ಸರಿಯಾದ ಮಾಹಿತಿ ನೀಡದ ತಹಶೀಲ್ದಾರ್‌ಗೆ ₹25 ಸಾವಿರ ದಂಡ

Share It

ಕೋಲಾರ: ಆರ್‌ಟಿಐ ಅರ್ಜಿಗೆ ಸರಿಯಾದ ಮಾಹಿತಿ ನೀಡದೆ ಒಂದು ಅರ್ಜಿಗೆ ಎರಡೆರಡು ಮಾಹಿತಿ ನೀಡಿದ
ಶ್ರೀನಿವಾಸಪುರ ತಾಲ್ಲೂಕು ಕಚೇರಿ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ತಹಶೀಲ್ದಾ‌ರ್ ಸುಧೀಂದ್ರ ಅವರಿಗೆ ರಾಜ್ಯ ಮಾಹಿತಿ ಆಯೋಗ ದಂಡ ವಿಧಿಸಿದೆ.

ಈ ಸಂಬಂಧ ಮೇಲ್ಮನವಿ ವಿಚಾರಣೆ ನಡೆಸಿರುವ ರಾಜ್ಯ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ, ತಹಶೀಲ್ದಾರ್‌ಗೆ ₹25 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಜೊತೆಗೆ ಶಿಸ್ತು ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೆ, ಪರಿಹಾರವಾಗಿ ಮೇಲ್ಮನವಿದಾರರಿಗೆ ₹10 ಸಾವಿರ ನೀಡಲು ಸೂಚಿಸಿದ್ದಾರೆ.


Share It

You cannot copy content of this page