ಸುದ್ದಿ

ಡ್ರಗ್ಸ್‌ ಮಾಫಿಯಾ ಮತ್ತು ಅಕ್ರಮ ದಂಧೆಯಲ್ಲಿ ಪೊಲೀಸರು ಶಾಮೀಲಾದರೆ ನೇರ ಕ್ರಮ: ಪರಮೇಶ್ವರ್

Share It

ಬೆಂಗಳೂರು: ಡ್ರಗ್ಸ್‌ ಮಾಫಿಯಾ ಮತ್ತು ಇತರ ಅಕ್ರಮ ದಂಧೆಯಲ್ಲಿ ಪೊಲೀಸರು ಶಾಮೀಲಾಗಿರುವುದು ಕಂಡು ಬಂದರೆ ಇನ್ನು ಎಚ್ಚರಿಕೆ ಕೊಡುವುದಿಲ್ಲ. ನೇರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದ ಅವರು ಡ್ರಗ್ಸ್‌ ದಂಧೆಯ ಜತೆ ನಂಟು ಹೊಂದಿದ್ದ ಇನ್‌ಸ್ಪೆಕ್ಟ‌ರ್ ಸೇರಿ 11 ಮಂದಿ ಪೊಲೀಸರನ್ನು ಅಮಾನತುಗೊ ಳಿಸಲಾಗಿದೆ. ಅವರ ವಿರುದ್ಧ ತಕ್ಷಣವೇ ಇಲಾಖಾ ವಿಚಾರಣೆ ನಡೆಸಿ, ಸರ್ಕಾರಕ್ಕೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಶಾಸಕರಿಗೆ ₹80 ಲಕ್ಷ ಕೊಟ್ಟಿರುವುದಾಗಿ ಅನೇಕಲ್ ಇನ್‌ಸ್ಪೆಕ್ಟ‌ರ್ ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಎರಡು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದೇನೆ’
ಶಾಸಕರ ಮೇಲೆ ಆರೋಪ ಮಾಡುತ್ತಾನೆ ಎಂದಾದರೆ, ಈವರೆಗೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ವರದಿ ಕೊಟ್ಟರೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.


Share It

You cannot copy content of this page