ಸುದ್ದಿ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

Share It

ಚಾಮರಾಜನಗರ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 6 ವರ್ಷ, 5 ತಿಂಗಳು ಜೈಲು ಶಿಕ್ಷೆ ಹಾಗೂ 18 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಪದ್ಮನಾಭ ಶಿಕ್ಷೆಗೆ ಒಳಗಾದ ಅಪರಾಧಿ. ಈತ 2021 ನವೆಂಬರ್ 13 ರಂದು ಬಹಿರ್ದೆಸೆಗೆ ತೆರಳಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ. ಆತನಿಂದ ತಪ್ಪಿಸಿಕೊಂಡು ಬಾಲಕಿ ಕುಟುಂಬದವರಿಗೆ ವಿಚಾರ ತಿಳಿಸಿದ್ದಳು.ಈ ಕೃತ್ಯ ಪ್ರಶ್ನಿಸಿದ್ದಕ್ಕೆ ಅಪರಾಧಿ ಬಾಲಕಿ ತಾಯಿ ಮತ್ತು ಸೋದರನನ್ನು ನಿಂದಿಸಿದ್ದಲ್ಲದೇ ಹಲ್ಲೆ ನಡೆಸಿದ್ದ.

ದಂಡ ಮೊತ್ತದಲ್ಲಿ ಸಂತ್ರಸ್ತ ಬಾಲಕಿಗೆ 10 ಸಾವಿರ ರೂ, ಆಕೆಯ ತಾಯಿ ಮತ್ತು ಸಹೋದರನಿಗೆ ತಲಾ 1 ಸಾವಿರ ರೂ. ಪರಿಹಾರ ನೀಡುವಂತೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ. ಎಸ್.ಜಿ.ಕೃಷ್ಣ ಅವರು ಸೂಚಿಸಿದ್ದಾರೆ.


Share It

You cannot copy content of this page