ಉಡುಪಿ: ಕಾರ್ಕಳದ ಮಾಜಿ ಶಾಸಕ ದಿವಂಗತ ಗೋಪಾಲ್ ಭಂಡಾರಿಯವರ ಪುತ್ರ ಸುದೀಫ್ ಭಂಡಾರಿ (48) ಆತ್ಮಹತ್ಯೆಗೆ ಶರಣಾಗಿದ್ದಾರೆ
ಬ್ರಹ್ಮಾವರ ಸಮೀಪದ ಬಾರ್ಕೂರು ಬಳಿ ರೈಲು ಹಳಿಗೆ ತಲೆಕೊಟ್ಟು ಜೀವ ಬಿಟ್ಟಿದ್ದಾರೆ ಎಂದು ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಸುದೀಪ್ ಭಂಡಾರಿ ಹೆಬ್ರಿಯಲ್ಲಿ ವೈನ್ ಶಾಪ್ ನಡೆಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು, ಸಹೋದರ ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.
ಇವರ ದುಡುಕಿನ ನಿರ್ಧಾರಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸೋಮವಾರ ರಾತ್ರಿ ಬ್ರಹ್ಮಾವರ ಸಮೀಪದ ಬಾರ್ಕೂರಿನಲ್ಲಿ ರೈಲಿಗೆ ತಲೆ ಕೊಟ್ಟಿದ್ದಾರೆ. ಹೆಬ್ರಿ ತಾಲೂಕು ನಿವಾಸಿಯಾಗಿರುವ ಸುದೀಪ್ ಭಂಡಾರಿ, ಆರ್ಥಿಕ ಮುಗ್ಗಟ್ಟಿನಿಂದ ಕೆಟ್ಟ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ. ಸುದೀಪ್ ಭಂಡಾರಿ ಹೆಬ್ರಿಯಲ್ಲಿ ವೈನ್ ಶಾಪ್ ನಡೆಸಿಕೊಂಡಿದ್ದರು. ಅಂತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.