ನವದೆಹಲಿ: ಎಷ್ಟೇ ವರ್ಷಗಳಿಂದ ನಿರ್ದಿಷ್ಟ ಮನೆಯಲ್ಲಿ ಬಾಡಿಗೆಗೆಂದು ವಾಸವಿರುವವರು ಬಾಡಿಗೆದಾರರಾಗಿ ಇರುತ್ತಾರೆಯೇ ಹೊರತು ಅವರು ಎಂದಿಗೂ ಆ ಮನೆಯ ಮಾಲೀಕತ್ವವನ್ನು ಪಡೆಯಲು ಸಾಧ್ಯವಿಲ್ಲ. ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮನೆ ಮಾಲೀಕ ಜ್ಯೋತಿ ಶರ್ಮಾ ಮತ್ತು ಬಾಡಿಗೆದಾರ ವಿಷ್ಣು ಗೋಯಲ್ ನಡುವಿನ ದೀರ್ಘಕಾಲದ ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಪೀಠ ಈ ಮೇಲಿನಂತೆ ಆದೇಶ ನೀಡಿದೆ.
1980ರ ದಶಕದಿಂದಲೂ ವಿಷ್ಣು ಗೋಯಲ್, ಜ್ಯೋತಿ ಶರ್ಮಾ ಅವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. 30 ವರ್ಷಗಳಿಗೂ ಹೆಚ್ಚು ಕಾಲ ವಾಸವಿದ್ದ ಅವರು, ಬಾಡಿಗೆ ಪಾವತಿಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು. ಮಾಲೀಕರು ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದನ್ನು ಆಧಾರವಾಗಿಟ್ಟುಕೊಂಡು, ಗೋಯಲ್ ಪ್ರತಿಕೂಲ ಸ್ವಾಧೀನದ ಸಿದ್ಧಾಂತದಡಿ ಆಸ್ತಿಯ ಮೇಲೆ ತಮ್ಮ ಹಕ್ಕು ಸ್ಥಾಪಿಸಿದ್ದರು. ಆದರೆ ಜ್ಯೋತಿ ಶರ್ಮಾ, ಆಸ್ತಿಯನ್ನು ತೆರವುಗೊಳಿಸುವಂತೆ ಮೊಕದ್ದಮೆ ಹೂಡಿದ್ದರು.