ಅಹಮದಾಬಾದ್: ಗೋಹತ್ಯೆ ಮಾಡಿದ್ದ ಪ್ರಕರಣದಲ್ಲಿ ಮೂವರಿಗೆ ಗುಜರಾತ್‌ನ ಅಮರೇಲಿ ಜಿಲ್ಲೆಯ ಸೆಷನ್ಸ್ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕಾಸೀಮ್ ಹಜೀ ಸೋಲಂಕಿ, ಸತ್ತರ್ ಇಸ್ಮಾಯಿಲ್ ಸೋಲಂಕಿ ಮತ್ತು ಅಕ್ರಮ್ ಹಜೀ ಸೋಲಂಕಿ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು.
ಗುಜರಾತಿನ ಪ್ರಾಣಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ
2017ರ ಅಡಿಯಲ್ಲಿ ಗೋವನ್ನು ಪವಿತ್ರ ಎಂದು ನಂಬಲಾಗುತ್ತದೆ ಎಂದು ಗೊತ್ತಿದ್ದರೂ ಹತ್ಯೆ ಮಾಡಿದ್ದಾರೆ. ಹೀಗಾಗಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 6 ಲಕ್ಷ ರೂ. ದಂಡ ವಿಧಿಸಿ ನ್ಯಾ. ರಿಜ್ವಾನ್ ಬುಖಾರಿ ಆದೇಶ ನೀಡಿದ್ದಾರೆ.