ಶಿವಮೊಗ್ಗ: ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಪರಿಶ್ರಮದಿಂದ ಮುಖ್ಯಮಂತ್ರಿಯಾದವರು. ಸ್ವಾಮೀಜಿಗಳ ಬೆಂಬಲದಿಂದ ಅಲ್ಲ. ದೇವೇಗೌಡರನ್ನು ಸಿಎಂ ಮಾಡಿ ಎಂದು ಯಾವ ಸ್ವಾಮೀಜಿಯೂ ಹೇಳಿಕೆ ನೀಡಿರಲಿಲ್ಲ. ಡಿಕೆಶಿ ಅವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ಗೌಡರು ತಮ್ಮ ಶ್ರಮದಿಂದ ಮುಖ್ಯಮಂತ್ರಿ ಆಗಿದ್ದಾರೆ. ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಎಂದೂ ಅಧಿಕಾರ ಹಿಡಿದವರಲ್ಲ. ಈಗಿನ ರೀತಿ ರಾಜಕೀಯ ಮಾಡಿದ್ದರೆ 1974ರಲ್ಲಿಯೇ ಸಿಎಂ ಆಗುತ್ತಿದ್ದರು ಎಂದರು. ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮಠಾಧೀಶರುಗಳ ಮಧ್ಯಪ್ರವೇಶ ಅನಗತ್ಯ. ರಾಜಕಾರಣಿಗಳಷ್ಟೆ ರಾಜಕೀಯ ಮಾಡಲಿ ಎಂದು ಹೇಳಿದರು.