ಸುದ್ದಿ

ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ; ಅತಿಥಿ ಉಪನ್ಯಾಸಕ ಅರೆಸ್ಟ್

Share It

ಬೆಳಗಾವಿ: ವಿದ್ಯಾರ್ಥಿನಿ ಮೇಲೆ ಅತಿಥಿ ಉಪನ್ಯಾಸಕ ಎರಡು ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಉಪನ್ಯಾಸಕನ ವಿರುದ್ಧ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ತಾಲೂಕಿನ ಬಸವನಕುಡಚಿ ನಿವಾಸಿ, ಖಾಸಗಿ ಪದವಿ ಕಾಲೇಜಿನ ಉಪನ್ಯಾಸಕ ನಾಗೇಶ್ವರ ಡೇಮಿನಕೊಪ್ಪ ಬಂಧಿತ ಅತಿಥಿ ಉಪನ್ಯಾಸಕ, ನಾಗೇಶ್ವರ, ಯುವತಿ ಮೇಲೆ ಅತ್ಯಾಚಾರ ಎಸಗಲೆಂದೇ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಬಾಡಿಗೆ ಮನೆ ಮಾಡಿ ನಿರಂತರವಾಗಿ 2 ವರ್ಷಗಳಿಂದ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ವಿಷಯ ಬಹಿರಂಗ ಪಡಿಸಿದರೆ ಕೊಲೆಗೈಯುತ್ತೇನೆ ಎಂದು ವಿದ್ಯಾರ್ಥಿನಿಗೆ ಜೀವ ಬೆದರಿಕೆ ಹಾಕಿದ್ದನಂತೆ. ಈ ವಿಷಯವನ್ನು ಯುವತಿಯು ತನ್ನ ಪೋಷಕರಿಗೆ ಹೇಳಿದ್ದಾಳೆ.

ಹಿಂದೂ ಸಂಘಟನೆ ಮುಖಂಡರ ಸಹಕಾರ ಪಡೆದು ಅತ್ಯಾಚಾರಿ ವಿರುದ್ಧ ಸಂತ್ರಸ್ತೆಯ ಪೋಷಕರು ದೂರು ದಾಖಲಿಸಿದ್ದಾರೆ. ಪೊಲೀಸರು ಉಪನ್ಯಾಸಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


Share It

You cannot copy content of this page