ಕಾನೂನು

ಅಫಿಡವಿಟ್‌ನಲ್ಲಿ ಅಪರಾಧ ಪ್ರಕರಣ ಮುಚ್ಚಿಟ್ಟರೇ ಅಭ್ಯರ್ಥಿ ಆಯ್ಕೆಯೇ ರದ್ದು: ಸುಪ್ರೀಂಕೋರ್ಟ್

Share It

ನವದೆಹಲಿ: ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಯು ತನ್ನ ಹಿಂದಿನ ಅಪರಾಧ ಪ್ರಕರಣವನ್ನು ಅಫಿಡವಿಟ್‌ನಲ್ಲಿ ಬಹಿರಂಗಪಡಿಸದಿದ್ದರೆ ಅತನ ಆಯ್ಕೆಯೇ ರದ್ದಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ, ಪ್ರಕ ರಣವೊಂದರಲ್ಲಿ ತನ್ನ ಶಿಕ್ಷೆಯನ್ನು ಬಹಿರಂಗಪಡಿಸದ ಕಾರಣ ಮಧ್ಯಪ್ರದೇಶ ರಾಜ್ಯದ ಪುರಸಭೆಯೊಂದರ ಸದಸ್ಯೆ ಪೂನಂ ಎಂಬುವವರ ಆಯ್ಕೆಯನ್ನು ರದ್ದು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಆಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಮೇಲಿನಂತೆ ಹೇಳಿದೆ.

ಒಮ್ಮೆ ಅಭ್ಯರ್ಥಿಯು ತನ್ನ ಹಿಂದಿನ ಅಪರಾಧ ಪ್ರಕರಣವನ್ನು ಚುನಾವಣಾ ಸಲ್ಲಿಕೆ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿಲ್ಲ ಎಂದು ಕಂಡು ಬಂದರೆ ಅದು ಮತದಾರರು ಮತಹಕ್ಕನ್ನು ಮುಕ್ತವಾಗಿ ಚಲಾಯಿಸುವಲ್ಲಿ ಅಡಚಣೆ ಮಾಡುತ್ತದೆ’ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.


Share It

You cannot copy content of this page