ಸುದ್ದಿ

ಶಾಲಾ ಪಠ್ಯವಾಗಲಿದೆ ಪುನೀತ್ ರಾಜ್‍ಕುಮಾರ್ ಸಾಧನೆ

Share It

ಬೆಂಗಳೂರು: ಅಪ್ಪು ಅಭಿಮಾನಿಗಳ ಬಹುದಿನಗಳ ಬೇಡಿಕೆಯೊಂದು ಈಡೇರಲಿದ್ದು, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಬದುಕಿನ ಕಥೆ ಶಾಲಾ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದಿದೆ. ಮುಂದಿನ ವರ್ಷದಿಂದ ಕರ್ನಾಟಕದ ಶಾಲೆಗಳ ಕನ್ನಡ ಪಠ್ಯದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸಾಧನೆ, ಸಾಮಾಜಿಕ ಸೇವಾ ವಿಚಾರಗಳನ್ನು ಅಡಕವಾಗಿದ್ದು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿದ್ದಾರೆ ಅಪ್ಪು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್, ‘ಪುನೀತ್ ಅವರ ಬದುಕಿನ ಕಥೆ ಪಠ್ಯಪುಸ್ತಕಕ್ಕೆ ಸೇರ್ಪಡೆಯಾಗಿರುವುದಕ್ಕೆ ಬಹಳ ಖುಷಿಯಾಗಿದೆ. ಈ ಗೌರವಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ತಮ್ಮ ತಂದೆಗೆ ಸಿಕ್ಕಿರುವ ದೊಡ್ಡ ಗೌರವ ಇದು ಎಂದು ನಮ್ಮ ಮಕ್ಕಳಿಗೂ ಸಂತೋಷವಾಗಿದೆ. ಮಾನ್ಯತೆ ಬಹಳ ಅಪರೂಪದ್ದು, ಚಿತ್ರರಂಗದಲ್ಲಿ ಹಲವು ಪ್ರತಿಭೆಗಳಿದ್ದರೂ ಪುನೀತ್ ಅವರ ಬದುಕಿನ ಕಥೆಯನ್ನು ಪಠ್ಯವಾಗಿಸಲು ಹೊರಟಿರುವುದು ಮರೆಯಲಾದದ್ದು’ ಎಂದಿದ್ದಾರೆ.

ಪುನೀತ್‌ ಅವರ ಬದುಕು ಪಠ್ಯಪುಸ್ತಕಕ್ಕೆ ಸೇರಬೇಕು ಎಂದು ಅಭಿಮಾನಿಗಳು ಹೋರಾಟ ಮಾಡಿದ್ದರು. ಇದಕ್ಕೆ ಹಲವು ಸಂಘ ಸಂಸ್ಥೆಗಳು ದನಿಗೂಡಿಸಿದ್ದವು. ಅದರಂತೆ ಶಾಲಾ ಪಠ್ಯದಲ್ಲಿ ಅಪ್ಪು ಸಾಧನೆ ಬರುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ


Share It

You cannot copy content of this page