ಸುದ್ದಿ

ಮೈಸೂರು ನನ್ನ ಹುಟ್ಟೂರು, ಅವರು ಬೇರೆ ಊರಿನಿಂದ ಬಂದವರು; ಪ್ರತಾಪ್ ಸಿಂಹನಿಗೆ ಮಾಜಿ ಶಾಸಕ ಎಲ್.ನಾಗೇಂದ್ರ ತಿರುಗೇಟು

Share It

ಮೈಸೂರು: ಪ್ರತಾಪ್ ಸಿಂಹ ಬೇರೆ ಊರಿನಿಂದ ಬಂದವರು. ನಾನು ಇದೇ ಊರಿನವನು, ಬೇರೆ ಕಡೆ ಹೋಗಲು ಆಗಲ್ಲ ನನ್ನ ಹುಟ್ಟೂರಿನಲ್ಲೇ ನನ್ನ ಹೋರಾಟ.ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದ ಟಿಕೆಟ್ಗಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಶಾಸಕ ಎಲ್. ನಾಗೇಂದ್ರ ನಡುವೆ ಮತ್ತೇ ಟಾಕ್ ವಾರ್ ಶುರುವಾಗಿದೆ.

ಮಾಜಿ ಸಂಸದ ಪ್ರತಾಪ ಸಿಂಹ ನೀಡಿರುವ ಹೇಳಿಕೆ ಕುರಿತು ಮಾತನಾಡಿರುವ ಮಾಜಿ ಶಾಸಕ ಎಲ್. ನಾಗೇಂದ್ರ, ಟಿಕೆಟ್ ಯಾರಿಗೆ ನೀಡಬೇಕು ಎಂದು ನಿರ್ಧರಿಸುವುದು ಹೈಕಮಾಂಡ್. ಪ್ರತಾಪ ಸಿಂಹಗೆ ಅದರ ಬಗ್ಗೆ ಅರಿವಿರಬೇಕಿತ್ತು. ಯಾವ ಕಾರಣಕ್ಕೆ ಆ ರೀತಿ ಹೇಳಿದರು ಗೊತ್ತಿಲ್ಲ. ನಾನು ಪಕ್ಷದ ಸಂಘಟನೆಗಾಗಿ ದುಡಿಯುತ್ತಿದ್ದೇನೆ. ನನ್ನ ಬಗ್ಗೆ ಯಾವ ಆಪಾದನೆಗಳಿಲ್ಲ. ನಾನು ಕೋರ್ಟ್ ನಿಂದ ಯಾವುದೇ ಸ್ಟೇ ತೆಗೆದುಕೊಂಡಿಲ್ಲ ಎಂದು ಪರೋಕ್ಷವಾಗಿ ಪ್ರತಾಪ್ ಸಿಂಹ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಪಾರ್ಲಿಮೆಂಟ್ ಟಿಕೆಟ್ ಕೊಡುವ ವೇಳೆ ಕೂಡ ಹೀಗೆಯೇ ಹೇಳಿ. ಪಾರ್ಲಿಮೆಂಟ್ ಟಿಕೆಟ್ ಯಾಕೆ ಅವರಿಗೆ ಸಿಗಲಿಲ್ಲ. ನನ್ನ ಕ್ಷೇತ್ರದ ಜೊತೆಗೆ ನಾಲ್ಕು ಕ್ಷೇತ್ರ ಗೆಲ್ಲಿಸಬೇಕಿದೆ. ನಮ್ಮ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ನಾನು ಕಡಿಮೆ ಅಂತರದಲ್ಲಿ ಸೋತಿದ್ದೇನೆ. ಪಕ್ಷದ ಇತಿಮಿತಿ ಮೀರಿ ಯಾರೂ ವರ್ತಿಸಬಾರದು.ಯಾರಿಗೆ ಟಿಕೇಟ್ ಕೊಡಬೇಕು ಎಂಬುದನ್ನು ಪಕ್ಷ ನಿರ್ಧಾರ ಮಾಡುತ್ತದೆ ಎಂದು ತಿರುಗೇಟು ನೀಡಿದ್ದಾರೆ.


Share It

You cannot copy content of this page