ಕುರ್‌ಕುರೆ ಕಂಪನಿಯವರು ಮಕ್ಕಳ ಆಕರ್ಷಣೆಗಾಗಿ ಒಳಗೆ ಇರಿಸಿದ್ದ ಪ್ಲಾಸ್ಟಿಕ್ ಬಾಲ್ ಮಗುವಿನ ಜೀವಕ್ಕೆ ಕುತ್ತು ತಂದಿದೆ
ಹುಣಸೂರು: ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಆಟಿಕೆ ಬಾಲ್ ನುಂಗಿ ಉಸಿರುಗಟ್ಟಿ 5 ವರ್ಷದ ಬಾಲಕ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗೌರಿಪುರದಲ್ಲಿ ನಡೆದಿದೆ.
ಗೌರಿಪುರ ಗ್ರಾಮದ ಸಂತೋಷ್-ಐಶ್ವರ್ಯ ದಂಪತಿಯ ಏಕೈಕ ಪುತ್ರ ಮುಕುಂದ್ ಮಯೂರ್ (5) ಮೃತಪಟ್ಟ ಮಗು. ಶನಿವಾರ ಮಗು ಮಯೂರ್ ಅಳುತ್ತಿದ್ದುದ್ದನ್ನು ಕಂಡ ಸಂಬಂಧಿಕರು ಗೌರಿಪುರದ ಅಂಗಡಿಯಲ್ಲಿ ಕುರ್‌ಕುರೆ ಪ್ಯಾಕೆಟ್ ಕೊಡಿಸಿದ್ದಾರೆ. ಕುರ್‌ಕುರೆ ಕಂಪನಿಯವರು ಮಕ್ಕಳ ಆಕರ್ಷಣೆಗಾಗಿ ಒಳಗೆ ಇರಿಸಿದ್ದ ಪ್ಲಾಸ್ಟಿಕ್ ಬಾಲ್ ನ್ನು ಮಗು ನುಂಗಿದೆ. ಈ ವೇಳೆ ಮಗುವಿನ ಒದ್ದಾಟ ಗಮನಿಸಿದ ಮನೆಯವರು ಕೂಡಲೇ ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಮಗು ಉಸಿರುಗಟ್ಟಿ ಮೃತಪಟ್ಟಿದೆ