ಸುದ್ದಿ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ಸರ್ಕಾರಿ ಭೂಮಿ ಕಬಳಿಕೆ: ಎಸ್.ಆರ್.ಹಿರೇಮಠ ಆರೋಪ

Share It

ಧಾರವಾಡ: ಮಾಜಿ‌ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಕುಟುಂಬದಿಂದ ನಡೆದಿರುವ ಸರ್ಕಾರಿ ಭೂಮಿ ಕಬಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಪರಿವರ್ತನಾ ಸಮುದಾಯ,ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಹಾಗೂ ಜನಾಂದೋಲಗಳ ಮಹಾಮೈತ್ರಿ ಜಂಟಿಯಾಗಿ 32 ಪುಟಗಳ ದಾಖಲೆಗಳ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಎಸ್.ಆರ್.ಹಿರೇಮಠ ಅವರು ರಾಮನಗರ ತಾಲೂಕು, ಬಿಡದಿ ಹೋಬಳಿ ಕೇತಿಗಾನಹಳ್ಳಿ ಗ್ರಾಮದ ಸರಕಾರಿ ಗೋಮಾಳ 110 ಎಕರೆ ಸೇರಿದಂತೆ 200 ಎಕರೆ ಜಮೀನನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತವರ ಕುಟುಂಬದವರು ಭೂ ಕಬಳಿಕೆ ನಡೆಸಿದ್ದಾರೆ. ಈ ದಾಖಲೆಗಳು ಈ ಭೂಕಬಳಿಕೆಗೆ ಸಂಬಂಧಿಸಿದವು ಎಂದು ಹೇಳಿದರು.


Share It

You cannot copy content of this page