ಸುದ್ದಿ

ವರ್ಷದಲ್ಲಿ ಎರಡು ಪ್ರತ್ಯೇಕ ಕೋರ್ಸ್‌ಗಳಿಗೆ ಪ್ರವೇಶ ಅವಕಾಶ;ಯುಜಿಸಿ ಮಾರ್ಗಸೂಚಿ

Share It

ನವದೆಹಲಿ: ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿ ನಿಯಮಗಳನ್ನು ಸರಳಗೊಳಿಸಿ ಯುಜಿಸಿ ಗುರುವಾರ ಕರಡು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಪ್ರಕಟಿಸಿರುವ ಯುಜಿಸಿ ಕರಡು ಮಾರ್ಗಸೂಚಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಕನಿಷ್ಠ ನಿಯಮಗಳು-2024 ಪ್ರಕಾರ, ವಿದ್ಯಾರ್ಥಿಗಳು ವರ್ಷದಲ್ಲಿ ಎರಡು ಪ್ರತ್ಯೇಕ ಅವಧಿಯಲ್ಲಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು.

ಅಲ್ಲದೆ ಸ್ಟ್ರೀಮ್‌ಗಳನ್ನು ಬದಲಾಯಿಸಲೂ ಅವಕಾಶ ದೊರೆಯಲಿದೆ. ಜತೆಗೆ ಕೋರ್ಸ್‌ನಿಂದ ಹೊರಹೋಗುವ ಮತ್ತು ನಂತರ ಅದನ್ನು ಓದುವ ಅವಕಾಶ ಸಿಗಲಿದೆ.


Share It

You cannot copy content of this page