ಕಲಬುರಗಿ : ಪಂಪ್ ಆಪರೇಟರ್ ರೊಬ್ಬರ ಮರು ನೇಮಕಾತಿ ಹಾಗೂ ವೇತನ ಮಂಜೂರು ಮಾಡಲು 17,000 ರೂ. ಫೋನ್ ಪೇ ಮೂಲಕ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಕಮಲಗಾ(ಬಿ) ಪಂಚಾಯತ್ ನ ಪಿಡಿಒ ಪ್ರೀತಿರಾಜ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಪಿಡಿಒ ಪ್ರೀತಿರಾಜ್ ಅವರಿಗೆ ಕೆಲವು ದಿನಗಳ ಹಿಂದೆ ಮನರೇಗಾ ಯೋಜನೆಯಲ್ಲಿ ಪ್ರಗತಿ ಸಾಧಿಸದೆ ಇರುವುದರಿಂದ ಅವರಿಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು, ಅದರ ಜೊತೆಗೆ ಇದೀಗ ಸೋಮವಾರ ಪಂಪ್ ಆಪರೇಟರ್ ರೊಬ್ಬರ ಮರು ನೇಮಕಾತಿ ಮತ್ತು ಆರು ತಿಂಗಳ ವೇತನ ಮಂಜೂರು ಮಾಡಲು ಲಂಚ ಪಡೆದಿದ್ದರು. ಈ ಕುರಿತಾಗಿ ಲೋಕಾಯುಕ್ತರು ಪ್ರೀತಿರಾಜ್ ಅವರನ್ನು ಬಂಧಿಸಿ, ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಮಾಹಿತಿ ನೀಡಿದ್ದರು.