ಬೆಂಗಳೂರು: ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿದ್ದ,ಡಕಾಯಿತಿ ಮಾಡುವ ಮೂಲಕ ಉಗ್ರಗಾಮಿ ಚಟುವಟಿಕೆಗಳಿಗೆ ಹಣ ಸಂಗ್ರಹಿಸುತ್ತಿದ್ದ ಬಾಂಗ್ಲಾದೇಶ ಮೂಲದ ಜಹಿದುಲ್ ಇಸ್ಲಾಂ ಎಂಬ ವ್ಯಕ್ತಿಗೆ ಬೆಂಗಳೂರಿನ ಎನ್ಐಎ ನ್ಯಾಯಾಲಯ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹57000 ರೂ.ದಂಡ ವಿಧಿಸಿ ಆದೇಶಿಸಿದೆ.
ಶಿಕ್ಷೆಗೊಳಗಾದ ಜಹಿದುಲ್ ಇಸ್ಲಾಂ ನಿಷೇಧಿತ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ ಸಂಘಟನೆಯ ಭಾರತದ ಕಮಾಂಡರ್ ಆಗಿದ್ದು, ಈತ ಬೆಂಗಳೂರಿನಲ್ಲಿ ನೆಲೆಸಿ,ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಿಂದ ಮುಸ್ಲಿಂ ಯುವಕರನ್ನು ಬೆಂಗಳೂರಿಗೆ ಕರೆತಂದು ಅವರನ್ನು ಉಗ್ರಗಾಮಿಗಳಾಗಿ ಮಾಡಲು ತರಬೇತಿ ನೀಡಿದ್ದನು. ಜೊತೆಗೆ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಲು ಬೆಂಗಳೂರಿನಲ್ಲಿ ಡಕಾಯಿತಿ ನಡೆಸಿದ್ದ. ಇದರಿಂದ ಬಂದ ಹಣವನ್ನು ಉಗ್ರಚಟುವಟಿಕೆಗಳಿಗೆ ಬಳಸುತ್ತಿದ್ದ.