ಬೆಂಗಳೂರು: ಪ್ರಕರಣವೊಂದರ ಕಲಾಪದ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು, ನ್ಯಾಯಮೂರ್ತಿಗಳಿಗೆ ರಜೆಯ ಅವಕಾಶಗಳು ಹೆಚ್ಚು. ರಜಾದಿನಗಳನ್ನು ಅವರು ಆರಾಮದಾಯಕವಾಗಿ ಕಳೆಯುತ್ತಾರೆ ಎಂದು ಭಾವಿಸುತ್ತಾರೆ. ಇಂತಹ ತಪ್ಪು ಕಲ್ಪನೆ ಇರಬಾರದು. ನ್ಯಾಯಮೂರ್ತಿಗಳ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು ಎಂದು ತೀಕ್ಷ್ಣವಾಗಿ ಹೇಳಿದರು.
ಹೈಕೋರ್ಟ್ ನ್ಯಾಯಮೂರ್ತಿಗಳು ಭಾರೀ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಕಾರ್ಯ ಒತ್ತಡದಿಂದ ಇತ್ತೀಚೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯೊಬ್ಬರು ನಿಧನರಾದ ದುರಂತ ಉದಾಹರಣೆ ನಮ್ಮ ಮುಂದಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು,ದಿನವೂಂದರಲ್ಲಿ 600ಕ್ಕೂ ಅಧಿಕ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಾ ತ್ವರಿತವಾಗಿ ನ್ಯಾಯದಾನ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಅವರ ಕಾರ್ಯತತ್ಪರತೆಯನ್ನು ವಕೀಲರು ಹೇಗೆ ಗಮನಿಸುತ್ತಿಲ್ಲ ಎಂದು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಬೇಸರ ವ್ಯಕ್ತಪಡಿಸಿದರು.