ಸುದ್ದಿ

ಗನ್ ಲೈಸೆನ್ಸ್ ರದ್ದು ಮಾಡದಂತೆ ಪೊಲೀಸರಿಗೆ ನಟ ದರ್ಶನ್ ಮನವಿ

Share It

ಬೆಂಗಳೂರು: ನಾನು ಸೆಲಿಬ್ರಿಟಿಯಾಗಿರುವ ಕಾರಣ ಹೋದೆಡೆಯೆಲ್ಲ ಜನರು ಸೇರುತ್ತಾರೆ.ಹಾಗಾಗಿ ಆತ್ಮರಕ್ಷಣೆಗಾಗಿ ನನಗೆ ಗನ್ ಬೇಕು, ಗನ್ ಲೈಸೆನ್ಸ್ ರದ್ದುಮಾಡಬೇಡಿ ಎಂದು ನಟ ದರ್ಶನ್ ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಕೊಲೆ ಅರೋಪದಲ್ಲಿ ಬಂಧನವಾದಾಗಲೇ ನಟ ದರ್ಶನ್ ಆತ್ಮರಕ್ಷಣೆಗಾಗಿ ಇಟ್ಟುಕೊಂಡಿದ್ದ ಗನ್ ಅನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದು, ಲೈಸೆನ್ಸ್ ರದ್ದು ಮಾಡಬೇಕೆಂಬ ನಿರ್ಧಾರ ತೆಗೆದುಕೊಂಡಿದ್ದರು.

ಈಗ ಅವರು ಜಾಮೀನು ಪಡೆದು ಹೊರಬಂದಿರುವ ಹಿನ್ನೆಲೆಯಲ್ಲಿ ತಮ್ಮ ಬಳಿಯಿರುವ ಗನ್ ಬಳಸಿ ಸಾಕ್ಷಿಗಳನ್ನು ಹೆದರಿಸುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಗನ್ ಲೈಸೆನ್ಸ್ ಯಾಕೆ ರದ್ದು ಮಾಡಬಾರದು ಎಂದು ಜನವರಿ 7ರಂದು ದರ್ಶನ್ ಗೆ ಪೊಲೀಸರು ನೋಟಿಸ್ ನೀಡಿದ್ದರು.


Share It

You cannot copy content of this page