ಮುಂಬೈ: ಯಾವುದೇ ಆರೋಪಿಯನ್ನು ವಿಚಾರಣೆ
ನಡೆಸದೇ ದೀರ್ಘಕಾಲ ಜೈಲಿನಲ್ಲಿಡುವುದು ಸಂವಿಧಾನದ ಉಲ್ಲಂಘನೆ. ವ್ಯಕ್ತಿಯೊಬ್ಬನ ಜೀವಿಸುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮುಂಬೈ ಹೈಕೋರ್ಟ್ ಬುಧವಾರ ಹೇಳಿದೆ.
2018ರ ಎಲ್ಗಾರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ವಿಚಾರಣೆಯನ್ನು ಇನ್ನಷ್ಟು ತ್ವರಿತ ಗೊಳಿಸಲು ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ಆಗ್ರಹಿಸಿದೆ. ವಿಶೇಷ ನ್ಯಾಯಾಲಯ 9 ತಿಂಗಳೊಳಗೇ ದೋಷಾರೋಪಗಳನ್ನು ದೃಢೀಕಕರಿಸಿ ಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎ.ಎಸ್.ಗಡ್ಕರಿ ಮತ್ತು ನ್ಯಾ.ಕಮಲ್ ಖಾಟಾ ಅವರ ವಿಭಾಗೀಯ ಪೀಠ ಹೇಳಿದೆ.
ವಿಲ್ಸನ್ ಮತ್ತು ಧಾವಳೆ ಈಗಾಗಲೇ 6 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ. ಸೂಕ್ತ ವಿಚಾರಣೆಯನ್ನೇ ನಡೆಸದೇ ಆರೋಪಿಯನ್ನು ದೀರ್ಘಕಾಲ ಜೈಲಿನಲ್ಲಿರಿಸುವುದು ಸಂವಿಧಾನದ 21ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.