ಸುದ್ದಿ

ಸುಳ್ಳು ಜಾತಿ ನಿಂದನೆ, ಪೋಕ್ಸೋ ಕೇಸ್ ಹಾಕಿದ ಮಹಿಳೆಗೆ ದಂಡ ವಿಧಿಸಿದ ಕೋಟ್೯

Share It

ಬೆಂಗಳೂರು: ಕೊಟ್ಟ ಸಾಲ ವಾಪಸ್ ಕೊಡುವಂತೆ ಕೇಳಿದ ಯುವಕನ ಮೇಲೆ ಸುಳ್ಳು ಜಾತಿ ನಿಂದನೆ ಮತ್ತು ಪೋಕ್ಸೋ ಪ್ರಕರಣ ದಾಖಲಿಸಿದ್ದ ಮಹಿಳೆಗೆ ದಂಡ ವಿಧಿಸಿರುವ ನ್ಯಾಯಾಲಯ ಪರಿಹಾರದ ಹಣ ವಾಪಸ್ ನೀಡುವಂತೆ ಆದೇಶಿಸಿದೆ.

ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಪೋಕ್ಸೋ ಫಾಸ್ಟ್ ಟ್ರ್ಯಾಕ್) ನ್ಯಾಯಾಧೀಶರಾದ ವಿನಯ್ ದೇವರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ಕಾನೂನು ದುರುಪಯೋಗ ಮಾಡಿ ಅಮಾಯಕರು ಜೈಲು ಕಂಬಿ ಎಣಿಸುವಂತೆ ಮಾಡಿದ್ದ ಮಹಿಳೆಗೆ ಸರ್ಕಾರದಿಂದ ನೀಡಲಾದ ಪರಿಹಾರದ ಮೊತ್ತವನ್ನು ವಾಪಸ್ ಕೊಡುವಂತೆ ನ್ಯಾಯಾಲಯ ಆದೇಶ ಮಾಡಿದೆ. ಒಂದು ವೇಳೆ, ಇದಕ್ಕೆ ವಿಫಲವಾದಲ್ಲಿ ಸರ್ಕಾರವೇ ದೂರುದಾರ ಮಹಿಳೆಯಿಂದ ಈ ಮೊತ್ತವನ್ನು ವಸೂಲಿ ಮಾಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಲಾಗಿದೆ.

ಏನಿದು ಪ್ರಕರಣ: ಬಂಟ್ವಾಳ ತಾಲೂಕಿನ ತೇಜಸ್ ಎಂಬ ಯುವಕ 2024ರ ಮಾರ್ಚ್ 21ರಂದು ತಮ್ಮ ಮನೆಗೆ ಅಕ್ರಮ ಪ್ರವೇಶ ಮಾಡಿ ಗಲಾಟೆ ಮಾಡಿದ್ದಲ್ಲದೆ ತನ್ನ ಅಪ್ರಾಪ್ತ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಹಾಗೂ ತಮ್ಮ ಜಾತಿ ನಿಂದನೆ ಮಾಡಿದ್ದ ಹಾಗೂ ತನ್ನ ಕುಟುಂಬದ ಸದಸ್ಯರಿಗೆ ಕೊಲೆ ಬೆದರಿಕೆ ಹಾಕಿದ್ದ ಎಂದು ಬಾಲಕಿಯ ತಾಯಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಪೊಲೀಸರು ಎಫ್‌ಐಆ‌ರ್ ದಾಖಲಿಸಿದ್ದು, ಪ್ರಕರಣದ ತನಿಖೆಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಕ್ಷಿಪ್ರಗತಿಯ ಪೋಕ್ಸೋ) ನ್ಯಾಯಾಲಯ ನಡೆಸಿತ್ತು.

ವಿಚಾರಣೆಯ ವೇಳೆ ಬಾಲಕಿಯ ತಾಯಿ ಆರೋಪಿ ತೇಜಸ್‌ನಿಂದ ಸಾಲ ಮತ್ತು ಚಿನ್ನ ಸಹಿತ 5.5 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ಪಡೆದುಕೊಂಡಿದ್ದರು ಎಂಬುದನ್ನು ಒಪ್ಪಿಕೊಂಡಿದ್ದರು. ತೇಜಸ್ ಈ ಬಗ್ಗೆ ಆಗಾಗ ತಾನು ನೀಡಿದ ಸಾಲ ವಾಪಸ್ ಕೇಳಿದ್ದ. ಇದರಿಂದ ತಪ್ಪಿಸಿಕೊಳ್ಳಲು ದೂರುದಾರ ಮಹಿಳೆ ತೇಜಸ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆಯ ಆರೋಪ ಮಾಡಿ ಸುಳ್ಳು ದೂರು ದಾಖಲಿಸಿದ್ದರು.

ಜೊತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರದ ಮೊತ್ತವನ್ನು ಪಡೆದುಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸುವ ವೇಳೆ ಬಾಲಕಿಯ ತಾಯಿ ಸಾಲ ಪಡೆದಿರುವ ವಿಚಾರವನ್ನು ಒಪ್ಪಿಕೊಂಡಿದ್ದರು. ಅಲ್ಲದೆ ಯುವಕನ ಮೇಲೆ ಸುಳ್ಳು ದೂರು ಹಾಕಿರುವುದನ್ನು ತಪ್ಪೋಪಿಕೊಂಡಿದ್ದರು.


Share It

You cannot copy content of this page