ಕೆಜಿಎಫ್: ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟ ಘಟ್ಟಕಾಮಧೇನಹಳ್ಳಿಯ ಸರ್ವೆ ನಂ.17ರಲ್ಲಿನ ಜಮೀನನ್ನು ಹಿಂದಿನ ಅಧ್ಯಕ್ಷೆ, ಉಪಾಧ್ಯಕ್ಷ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಒಟ್ಟು 12 ಮಂದಿಗೆ ಇಲ್ಲಿನ ನ್ಯಾಯಾಲಯ ಒಂದು ವರ್ಷ ಸಜೆ ಮತ್ತು ದಂಡ ವಿಧಿಸಿದೆ.
ಘಟ್ಟಕಾಮಧೇನಹಳ್ಳಿಯ ಸರ್ವೆ ಸಂಖ್ಯೆ 17ರಲ್ಲಿನ ಸರ್ಕಾರಿ ಖರಾಬ್ ಜಾಗವನ್ನು 2016ರಲ್ಲಿ ಅಕ್ರಮವಾಗಿ ಹನ್ನೆರಡು ಜನರಿಗೆ ಖಾತಾ ಮಾಡಿಕೊಡಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಂ. ಮಂಜು 17 ಮಂದಿಗೆ ಜೈಲು ಶಿಕ್ಷೆ ಜೊತೆಗೆ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತೀರ್ಪಿನ ಅನ್ವಯ ಅಂದಿನ ಅಧ್ಯಕ್ಷೆ ಮಂಜು ಭಾರ್ಗವಿ, ಉಪಾಧ್ಯಕ್ಷ ಶಶಿಧರ್, ಪಿಡಿಒ ರತ್ನಮ್ಮ, ಬಿಲ್ ಕಲೆಕ್ಟರ್ ಮತ್ತು ಕಂಪ್ಯೂಟರ್ ಆಪರೇಟರ್ ಮತ್ತು ರಾಜೇಂದ್ರ ಮತ್ತು ಖಾತೆ ಮಾಡಿಕೊಂಡ ಫಲಾನುಭವಿಗಳಾದ
ಮುರುಗೇಶ್, ಸುಬ್ರಹಣಿ, ಕದಂಬವತಿ, ಶ್ರೀನಿವಾಸ್, ಪ್ರಿಯ. ಶ್ರೀಧರ್, ಅಣ್ಣಾದೊರೈ, ಆರ್. ಪಾಂಡುರಂಗನ್ ಮತ್ತು ಬಿ.ರವಿ ಚಂದ್ರನ್ ಅಪರಾಧಿಗಳಾಗಿದ್ದಾರೆ. ಉಳಿದ ತಪ್ಪಿಸ್ಥರಾದ ಗಂಗಾಧರಂ, ಜಗದಂಬಾಲ್ ಮತ್ತು ಎಡ್ರಿನ್ ಮೃತಪಟ್ಟಿದ್ದಾರೆ.
ಈ ಪೈಕಿ ಅಂದಿನ ಅಧ್ಯಕ್ಷೆ ಮಂಜು ಭಾರ್ಗವಿ, ಉಪಾಧ್ಯಕ್ಷ ಶಶಿಧರ್, ಪಿಡಿಒ ರತ್ನಮ್ಮ, ಸಿಬ್ಬಂದಿ ನಾರಾಯಣಸ್ವಾಮಿ ಮತ್ತು ರಾಜೇಂದ್ರಗೆ ಒಂದು ವರ್ಷ ಜೈಲು ಮತ್ತು ₹6,000 ದಂಡ ವಿಧಿಸಲಾಗಿದೆ. ಇನ್ನು ಅಕ್ರಮ ಜಮೀನಿನ ಫಲಾನುಭವಿಗಳಿಗೆ ಒಂದು ವರ್ಷ ಕಾರಾಗೃಹ ಮತ್ತು ₹2,000 ದಂಡ ವಿಧಿಸಲಾಗಿದೆ.