ಸುದ್ದಿ

2000 ನೌಕರರು ಕೆಲಸದಿಂದ ವಜಾ; ಅಮೇರಿಕಾ ಅಧ್ಯಕ್ಷ ಟ್ರಂಪ್ ಆದೇಶ!

Share It

ವಾಷಿಂಗ್ಟನ್: ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ(ಯುಎಸ್ಎಐಡಿ)ಯ 2,000 ಉದ್ಯೋಗಿಗಳನ್ನು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಕೆಲಸದಿಂದ ಉಚ್ಚಾಟನೆ ಮಾಡಿದ್ದು ಇನ್ನಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ!

ಯುಎಸ್ಎಐಡಿ ಸಂಸ್ಥೆಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಹೊರತು ಪಡಿಸಿ ಉಳಿದವರೆಲ್ಲರನ್ನೂ ಆಡಳಿತಾತ್ಮಕ ರಜೆ ಮೇಲೆ ಇರಿಸುವ ಕ್ರಮವನ್ನೂ ಕೈಗೊಳ್ಳಲಾಗಿದೆ. ಅಮೆರಿಕದ ಜಿಲ್ಲಾ ನ್ಯಾಯಾಧೀಶ ಕಾರ್ಲ್ ನಿಕೊಲ್ಸ್ ಯುಎಸ್‌ಎಡ್‌ನಿಂದ ನೌಕರರ ಮನವಿಯನ್ನು ತಿರಸ್ಕರಿಸಿದ ನಂತರ ಭಾನುವಾರ ರಾತ್ರಿ ಇಂತಹ ಕೈಗೊಳ್ಳಲಾಗಿದೆ. ಸರ್ಕಾರದ ಯೋಜನೆಗಳಿಗೆ ನೀಡಲಾಗಿರುವ ತಾತ್ಕಾಲಿಕ ತಡೆಯಾಜ್ಞೆ ವಿಸ್ತರಿಸುವಂತೆ ಈ ನೌಕರರು ಮನವಿ ಮಾಡಿದ್ದರು. ಈಗಾಗಲೇ ವಾಷಿಂ ಗ್ಟನ್‌ನಲ್ಲಿರುವ ಯುಎಸ್ ಎಐಡಿಯ ಪ್ರಧಾನ ಕಚೇರಿ ಮುಚ್ಚಲಾಗಿದೆಯಂತೆ.


Share It

You cannot copy content of this page