ಸುದ್ದಿ

ನ್ಯಾಯಾಲಯದ ನೋಟಿಸ್, ಸಮನ್ಸ್ ಇ-ಮೇಲ್ ಮೂಲಕ ಜಾರಿ; ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

Share It

ಬೆಂಗಳೂರು: ನ್ಯಾಯಾಲಯಗಳು ಇ-ಮೇಲ್ ಮೂಲಕ ನೋಟಿಸ್‌ ಹಾಗೂ ಸಮನ್ಸ್ ಜಾರಿಗೊಳಿಸಲು ಅನುಕೂಲವಾಗುವಂತೆ ಅಗತ್ಯ ತಿದ್ದುಪಡಿ ನಿಯಮ ರೂಪಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ವಕೀಲ ಅನಿರುದ್ಧ ಸುರೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆ‌ರ್.ದೇವದಾಸ್ ಅವರ ಪೀಠಕ್ಕೆ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿ ಈ ಮಾಹಿತಿ ನೀಡಿದೆ.

ಇ-ಮೇಲ್ ಮೂಲಕ ನೋಟಿಸ್ ಜಾರಿ ಮಾಡಲು ಅನುಕೂಲ ವಾಗುವಂತೆ ನಿಯಮಗಳನ್ನು ರೂಪಿಸಿ ಅನುಮೋದಿಸುವ ತುರ್ತು ಅಗತ್ಯವಿದೆ. ಹಾಗಾಗಿ, ನಿಯಮಗಳ ತಿದ್ದುಪಡಿಗೆ ಹೈಕೋರ್ಟ್ ಮಾಡಿರುವ ಶಿಫಾರಸು ಬಗ್ಗೆ ಫೆ.25 ರೊಳಗೆ ಮಾಹಿತಿ ನೀಡುವಂತೆ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಈ ಹಿಂದೆ ಸೂಚಿಸಿತ್ತು.


Share It

You cannot copy content of this page