ಸುದ್ದಿ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಣ ದುರ್ಬಳಕೆ ಆರೋಪ; ತನಿಖೆಗೆ ಆದೇಶ

Share It

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಣದ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಗೆ ಸಹಕಾರ ಇಲಾಖೆ ಸಹಕಾರ ಸಂಘಗಳ ಉಪ ನಿಬಂಧಕ ಪಿ.ಶಶಿಧರ್ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.

ಸಾಮಾಜಿಕ ಹೋರಾಟಗಾರ ಎನ್.ಹನುಮೇಗೌಡ, ಸಾಹಿತಿ ಕೆ.ಎಂ.ಮರುಳಸಿದ್ದಪ್ಪ ಮತ್ತಿತರರು, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ಪ್ರೊ.ಜಯಪ್ರಕಾಶ ಗೌಡ, ಕಸಾಪ ಸೊರಬ ತಾಲೂಕು ಘಟಕ, ಪ್ರೊ.ಪುಟ್ಟಯ್ಯ, ಇತರರ ದೂರುಗಳ ಸತ್ಯಾಸತ್ಯತೆ ತಿಳಿಯಲು ಬೆಂಗಳೂರು ನಗರ ಜಿಲ್ಲೆಯ 2ನೇ ವಲಯದ ಸಹಕಾರ ಸಂಘಗಳ ಉಪ ನಿಬಂಧಕರು ವಿಸ್ತ್ರತ ವಿಚಾರಣೆಗೆ ಆದೇಶಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ। ಮಹೇಶ್ ಜೋಷಿ ನೇತೃತ್ವದಲ್ಲಿ 2022-23ರಿಂದ ಈವರೆಗೆ ಕೈಗೊಂಡ ಹಲವು ನಿರ್ಧಾರಗಳು,ಜಿಲ್ಲಾ, ತಾಲೂಕು ಘಟಕಗಳಿಗೆ ನೀಡಿರುವ ಅನುದಾನದಲ್ಲಿನ ಹಣ ದುರುಪಯೋಗ, ವಾಹನಗಳನ್ನು ಖರೀದಿಸಿರುವ ಮತ್ತು ಮಾರಾಟ ಮಾಡಿದಲ್ಲಿ ಮಾಡಿರುವ ಹಣ ದುರುಪಯೋಗ ಸೇರಿ 17 ಅಂಶಗಳನ್ನು ಒಳಗೊಂಡ ಆರೋಪಗಳ ಕುರಿತು ವಿಚಾರಣೆ ನಡೆಸಿ 45 ದಿನದ ಒಳಗೆ ವರದಿ ಸಲ್ಲಿಸುವಂತೆ ಸಹಕಾರಿ ಇಲಾಖೆ ಸೂಚಿಸಿದೆ.


Share It

You cannot copy content of this page