ಬೆಂಗಳೂರು: ಅಪಘಾತಕ್ಕೀಡಾದವರು, ಸುಟ್ಟಗಾಯಾಳುಗಳು, ಅಪರಾಧ,ಕಾನೂನು ಸಂಘರ್ಷದಂಥ ಪ್ರಕರಣದಲ್ಲಿ ಗಾಯಾಗೊಂಡು ಆಸ್ಪತ್ರೆಗೆ ದಾಖಲಾದವರಿಗೆ ಚಿಕಿತ್ಸೆ ವಿಳಂಬ ಮಾಡದೆ ರಾಜ್ಯದ ಆಸ್ಪತ್ರೆಗಳು ಮುಂಗಡ ಹಣ ಪಾವತಿಗೆ ಒತ್ತಾಯಿಸದೆ ಕಡ್ಡಾಯವಾಗಿ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸೂಚಿಸಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಆರೋಗ್ಯ ಇಲಾಖೆ, ನೋಂದಣಿ ಆದ ಎಲ್ಲ ವೈದ್ಯರು, ವೈದ್ಯಕೀಯ ಸಂಸ್ಥೆಗಳು ಚಿಕಿತ್ಸೆ ವಿಳಂಬ ಮಾಡದೆ, ನಿರಾಕರಿಸದೆ ಮೊದಲು ಪ್ರಾಥಮಿಕ ಚಿಕಿತ್ಸೆ ಒದಗಿಸಿ ಆರೋಗ್ಯ ಸ್ಥಿರವಾಗುವಂತೆ ನೋಡಿಕೊಳ್ಳಬೇಕು. ಸೌಲಭ್ಯದ ಕೊರತೆಯಿದ್ದರೆ ಸಮೀಪದ ಆಸ್ಪತ್ರೆಗಳಿಗೆ ವರ್ಗಾಯಿಸುವ ಮುನ್ನ ಪ್ರಥಮ ಚಿಕಿತ್ಸೆ ನೀಡಬೇಕು. ನಂತರ ಸಂಪೂರ್ಣ ವೈದ್ಯಕೀಯ ವಿವರದ ಜತೆಗೆ ಕಳುಹಿಸಬೇಕು ಇಲ್ಲದಿದ್ದಲ್ಲಿ ಆಸ್ಪತ್ರೆ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.